ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಗೋಲ್ಮಾಲ್
.
ಧಾರವಾಡ
ಹುಡಾ ಅಧ್ಯಕ್ಷ ನಾಗೋಸಾ ಕಲ್ಬುರ್ಗಿ ಅವರೇ ಹುಡಾದ ಸೈಟ್ ಹಂಚಿಕೆಯ ಗೋಲ್ಮಾಲ್ ತನಿಖೆಯ ಪ್ರಗತಿ ಎಲ್ಲಿಗೆ ಬಂತು?…
ಸರ್ಕಾರಿ ನಿವೇಶನ ಹಂಚಿಕೆಯ ಗೋಲ್ಮಾಲ್ ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಪೇಢಾ ನಗರಿಯಲ್ಲಿ ಪೇಢಾ ತಿಂದಷ್ಟೆ ಸುಲಭ ಎನ್ನುವ ರೀತಿಯಲ್ಲಿ ಕೆಲವು ಸೊ ಕಾಲ್ಡ ತಿಮಿಂಗಿಲಗಳು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಂಧಾ ದರ್ಬಾರ ನಡೆಸುತ್ತಿದ್ದಾರೆ ಎನ್ನುವ ಆರೋಪವು ಕೇಳಿ ಬಂದಿದೆ.
ಹೀಗಾಗಿ ಧಾರವಾಡ ಹೈಕೋರ್ಟಗೆ ಸ್ಟೇ ಹೋಗಲು ನಿವೇಶನ ವಂಚಿತರು ಮುಂದಾಗಿ
ಈಗಾಗಲೇ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ
ಮತ್ತು ಅಧ್ಯಕ್ಷರಿಗೆ ದೂರು ಕೊಟ್ಟಿದ್ದಾರೆ.
2016 ರಲ್ಲಿ ಒಟ್ಟು 215 ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಸೈಟಿಗಾಗಿ ಅರ್ಜಿ ಸಲ್ಲಿಸಲಾಗಿತ್ತು.
ಈ ವೇಳೆ ಬಸವರಾಜ ಐರಣಿ ಎನ್ನುವರು 10/15 ಅಳತೆಯ ಸೈಟಿಗಾಗಿ ಯುನಿವರ್ಸಿಟಿ ಬ್ಲೂ ಕೋಟಾದಡಿ 58,805 ರೂಪಾಯಿ ಹಣ ತುಂಬಿದ್ದರು.
ಆದ್ರೆ ಮೊನ್ನೆ ನಡೆದ ಲಾಟರಿ ಆಯ್ಕೆಯ ಪ್ರಕ್ರಿಯೆಯಲ್ಲಿ ಬಿಜೆಪಿಯ ಸುನೀಲ ಮೋರೆ ಲಾಟರಿ ಆಯ್ಕೆಯನ್ನು ಮಾಡಿ ಯಾವುದು ಪಾರದರ್ಶಕವಾಗಿಲ್ಲಾ.
ಎಲ್ಲವೂ ನಮ್ಮದೇ ಆಟ ಎಂದು ಲಾಟರಿ ಎಬಿಸಿದ್ದಾರೆ.
ಈ ಆಯ್ಕೆ ಪ್ರಕ್ರಿಯೆ ಗೊಂದಲದಿಂದ ಕೂಡಿದೆ ನಮಗೆ ಅನ್ಯಾಯವಾಗಿದೆ ಎಂದು ಬಸವರಾಜ ಐರಣಿ ಹುಡಾಕ್ಕೆ ಮನವಿ ಮಾಡಿ ಮತ್ತೊಮ್ಮೆ ತನಿಖೆ ನಡೆಸಿ ಎಂದು ಮನವಿ ಮಾಡಿದ್ರು.
ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು ಎಂದು ನಿವೇಶನ ವಂಚಿತ ವ್ಯಕ್ತಿಯಿಂದ ಅರ್ಜಿಪಡೆದು ಸ್ವೀಕೃತಿ ಕೊಟ್ಟು ಸಮಾಧಾನ ಮಾಡಿ ಕಳಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಲಾಟರಿ ಎತ್ತುವುದು ಕಾನೂನು ಬಾಹಿರ ಆದ್ರೆ ಹುಡಾ ಸದಸ್ಯ ಸುನೀಲ್ ಮೋರೆ ತಾವೇ ಮುಂದೆ ನಿಂತು ಲಾಟರಿ ಎತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.