ಅಕಾಲಿಕ ಮಳೆಗೆ ಒಡೆದ ಹೊಲ್ತಿಕೋಟೆ ಕೆರೆ ಕಟ್ಟೆ..
ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ರೈತಾಪಿ ವರ್ಗ ಕಂಗಾಲಾಗಿ ಹೋಗಿದೆ.
ರೈತರು ಬೆಳೆದು ಬೆಳೆಗಳು ಕೈಗೆ ಬಾರದಂತೆ ಆಗಿವೆ. ಮಂಗಳವಾರ ಸುರಿದ ಭಾರಿ ಅಕಾಲಿಕ ಮಳೆ ರೈತರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.
ಹೌದು ಧಾರವಾಡ ಜಿಲ್ಲೆಯಲ್ಲಿ ಅಳ್ನಾವರ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿಮಾಡಿದೆ.
ಅಲ್ಲದೇ ಧಾರವಾಡ ತಾಲೂಕಿನ ಹೊಲ್ತಿಕೋಟಿ ಗ್ರಾಮದ ಹೊರವಲಯದಲ್ಲಿ ಕೆರೆಯ ಒಡ್ಡು ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಪೊಲಾಗಿದೆ. ಜೋತೆಗೆ ಕೆರೆನೀರು ಸಹ ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ.
ಇನ್ನು ಅಂಬ್ಲಿಕೊಪ್ಪ ಗ್ರಾಮದ ಬೇಡ್ತಿಹಳ್ಳದ ಅಕ್ಕಪಕ್ಕದ ಜಮೀನುಗಳಿಗೆ ಹಳ್ಳದ ನೀರು ನುಗ್ಗಿದ ಪರಿಣಾಮ ಮೆಕ್ಕೆಜೋಳ, ಕಬ್ಬು, ಬಾಳೆ ತೋಟಗಳ ಬೆಳೆಗಳು ಹಾನಿಯಾಗಿವೆ.
ಮುಂಗಾರಿನಲ್ಲಿಯೂ ಸಹ ವರುಣನ ಈ ರೀತಿಯ ಆರ್ಭಟದಿಂದ ಬೆಳೆನಾಶ ಆಗಿತ್ತು.
ಈಗ ಹಿಂಗಾರು ಬೆಳೆಗಳು ಸಹ ಮಳೆಯಿಂದ ಹಾನಿಯಾಗಿದೆ. ಇದರಿಂದ ರೈತ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಮಳೆಯಿಂದ ನೆಲಕಚ್ಚಿದ ಪರಿಣಾಮ ರೈತ ಮಹಿಳೆ ಕಣ್ಣೀರು ಹಾಕಿದ್ದಾರೆ.
ಸಾಲಸೊಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮಳೆಯಿಂದ ಹಳ್ಳದ ನೀರು ಜಮೀನಿಗೆ ನುಗ್ಗಿ ನಮ್ಮ ಬೆಳೆ ಹಾನಿ ಮಾಡಿದೆ ಎಂದು ರೈತ ಮಹಿಳೆ ತಮ್ಮ ಅಳಲನ್ನು ತೋಡಿಕೊಂಡರು.