ಮುಂಬೈ
ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮಹತ್ವದ ಕಾರ್ಯಾಗಾರ ಹೊರ ರಾಜ್ಯ ಮಹಾರಾಷ್ಟದಲ್ಲಿ ನಡೆಯುತ್ತಿದೆ.
ಮಹಾರಾಷ್ಟ್ರ ರಾಜ್ಯದ ಸೇವಾಗ್ರಾಮ ಆಶ್ರಮದ ವಾರ್ಧಾದಲ್ಲಿ 3 ದಿನಗಳ ವರ್ಕಶಾಪ್ ನಡೆಯುತ್ತಿದೆ.
ಈ ಕಾರ್ಯಕ್ರಮವನ್ನು ಎಐಸಿಸಿ ನಾಯಕರು ಉದ್ಘಾಟನೆ ಮಾಡಿದ್ರು.
ಈ ವರ್ಕಶಾಪನಲ್ಲಿ ರಾಜ್ಯದ 5 ಮಂದಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ವರ್ಕಾಶಾಪನಲ್ಲಿ ಈಗಾಗಲೇ ಕಾಂಗ್ರೆಸ್ ಮುಖಂಡರು ಹಾಗೂ ಎಐಸಿಸಿ ಹಿರಿಯ ನಾಯಕರು ಪಾಲ್ಗೊಂಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ವಕೀಲರಾಗಿ ಕಾನೂನಿನ ಅನುಭವವನ್ನು ಹೊಂದಿರುವ ಪಿ.ಎಚ್.ನೀರಲಕೇರಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಪಕ್ಷದಲ್ಲಿ ನಾಯಕರುಗಳಿಗೆ ಸೂಕ್ತ ಸ್ಥಾನಮಾನ ಕೊಡುವುದು ಸೇರಿದಂತೆ ರಾಜ್ಯದ ಮುಂಬರುವ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ದೃಷ್ಟಿಯಿಂದ ಎಲ್ಲಾ ನಾಯಕರು ಒಗ್ಗಟಾಗಿ ಕೆಲಸ ಮಾಡಿ ಎಂದು ಸೂಚನೆ ಕೊಡಲಾಗಿದೆ.