ನೋಡಲು ಸಾದಾ ಮನುಷ್ಯನಾದ್ರೂ ಕೂಡ, ಶಿಕ್ಷಣದ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಸಿಂಪಲ್ ವ್ಯಕ್ತಿಗೆ ಇಂದು ದೇಶದ ಗೌರವಾನ್ವಿತ ಪ್ರಶಸ್ತಿ ಲಭಿಸಿದೆ.
ತನ್ನ ಸ್ವಂತ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ
ಕಿತ್ತಳೆ ಹಣ್ಣುಗಳನ್ನು ಮಾರಿ, ತಮ್ಮ ಊರಲ್ಲಿ ಶಾಲೆಯನ್ನು ನಿರ್ಮಿಸಿ ತಾಯಿ ಸರಸ್ವತಿಯ ಸೇವೆಯನ್ನು ಮಾಡುತ್ತಾ ಬಂದಿರುವ ಶ್ರೀ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟುಗೌರವಿಸಲಾಗಿದೆ.
ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತ ಸರಕಾರ ಇಂದು ಪದ್ಮ ಪ್ರಶಸ್ತಿಯನ್ನು ಪ್ರಧಾನ ಮಾಡಿದೆ.
ಇನ್ನು ದೆಹಲಿಗೆ ತೆರಳುವಾಗ ಸ್ಪೈಸ್ ಜೆಟ್ ವಿಮಾನ ಹತ್ತುವಾಗ ಹಾಜಬ್ಬ ಅವರ ಸರಳತೆ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.
ಬರಿಗಾಲಿನಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದ ಸಂದರ್ಭ ಕೂಡ ಶ್ರೀ ಹರೇಕಳ ಹಾಜಬ್ಬ ಅವರ ಸರಳ ಜೀವನವನ್ನು ಎಲ್ಲರಿಗೂ ತೋರಿಸುತ್ತೆ.
ಅಕ್ಷರ ಸಂತನಾಗಿ ಸಮಾಜ ಸೇವೆಯನ್ನು ಮಾಡುತ್ತಿರುವ ಹಾಜಬ್ಬ ಅವರು ನಮಗೆಲ್ಲ ಮಾದರಿ ಅವರಿಗೆ ನಮ್ಮ ಪಾವರ್ ಸಿಟಿ ನ್ಯೂಸನಿಂದ ಶುಭಾಶಯಗಳು….