ಧಾರವಾಡರಾಜ್ಯರಾಷ್ರ್ಟೀಯ

ಯೂನಿವರ್ಸಿಟಿ ಚಾಲೆಂಜ್‌ನಲ್ಲಿ ನಿಖಿತಾಗೆ ತೃತೀಯ

ಬ್ರೆಜಿಲ್‌ ದೇಶದ
ವಿಟೆಕ್ಸ್ ಬ್ರೆಜಿಲ್ ಕಂಪನಿ ವತಿಯಿಂದ ಆಯೋಜಿಸಲಾಗಿದ್ದ ಜಾಗತಿಕ ಮಟ್ಟದ ಯೂನಿವರ್ಸಿಟಿ ಚಾಲೆಂಜ್‌ನಲ್ಲಿ ( ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಸೃಜನ ಶೀಲತೆ ) ನಗರದ ನಿಖಿತಾ ಸತ್ಯಶೋಧ ಮಾಚಿಗಣಿ 3 ನೇ ಸ್ಥಾನ ಪಡೆದಿದ್ದಾರೆ.

ಇ ಕಾಮರ್ಸ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಈ ಸ್ಪರ್ಧೆ ಅ . 29 , 30 ರಂದು ಬ್ರೆಜಿಲ್‌ನ ರಿಯೋ ನಗರದಲ್ಲಿ ನಡೆದಿತ್ತು . ಸ್ಪರ್ಧೆಯಲ್ಲಿ ಜಗತ್ತಿನ 1.50 ಲಕ್ಷದಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು . ಇದರಲ್ಲಿ ಭಾರತದಿಂದ ನಾನೊಬ್ಬಳೇ ಕೊನೇ ಸುತ್ತಿಗೆ ಆಯ್ಕೆಯಾಗಿ ಮೂರನೇ ಸ್ಥಾನ ಪಡೆದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು , ಆರಂಭಿಕ ಹಂತದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಟಾಪ್ 600 ವಿದ್ಯಾರ್ಥಿಗಳಲ್ಲಿ ನಾನು ಆಯ್ಕೆಯಾಗಿದ್ದೆ . ನಂತರ ಉಪಾಂತ್ಯದಲ್ಲಿ ಸಹ ಉತ್ತಮ ಪ್ರದರ್ಶನ ತೋರಿದ್ದರಿಂದ ಅಂತಿಮ ಪಂದ್ಯಕ್ಕೆ ಆಯ್ಕೆಯಾಗಿದ್ದೆ . ವಿಶ್ವ ಮಟ್ಟದಲ್ಲಿ 3 ನೇ ಸ್ಥಾನ ಪಡೆದಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.

ನಮ್ಮ ದೇಶದ ಯುವ ಶಕ್ತಿಯ ಸಾಮರ್ಥ್ಯವನ್ನು ಇತರ ದೇಶಗಳ ಪ್ರತಿನಿಧಿ ಗಳೊಂದಿಗೆ ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿತ್ತು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಬೌದ್ಧಿಕ ಸಾಮರ್ಥ್ಯದ ಜತೆಗೆ ನಮ್ಮ ಪ್ರತಿಭೆ ಪ್ರದರ್ಶನಕ್ಕೆ ಸಹಕಾರಿ ಆಗಲಿದೆ . ದೇಶದಿಂದ ನಾನೊಬ್ಬಳೇ ಸ್ಪರ್ಧೆಗೆ ಆಯ್ಕೆಯಾಗಿರು ವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬ್ರೆಜಿಲ್‌ಗೆ ತೆರಳಲು ಅಗತ್ಯ ವ್ಯವಸ್ಥೆ ಕಲ್ಪಿಸಲು ನಗರದ ಪೊಲೀಸ್ ಆಯುಕ್ತರು ಸೇರಿ ಅನೇಕ ಜನರು ಸಹಾಯ ಮಾಡಿದ್ದಾರೆ .

ಅವರೆಲ್ಲರ ಸಹಕಾರದಿಂದಲೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದರು.

Related Articles

Leave a Reply

Your email address will not be published. Required fields are marked *