ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ
ಈಜಲು ಹೋದ ಸಹೋದರರಿಬ್ಬರು ಸಾವು
ಸಹೋದರರಿಬ್ಬರು ಈಜಲು ಹೋಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೇವಣಸಿದ್ದಯ್ಯಾ ಹಿರೇಮಠ ಅವರ ಜಮೀನುದಲ್ಲಿ ಇರುವ ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ.
ಚಂದ್ರು ಮರಿಬಸನಗೌಡರ( 7) ಮತ್ತು ಗೌತಮ ಮರಿಬಸನಗೌಡರ( 10) ಮೃತರು ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣ ಇದಾಗಿದೆ.