ಸ್ಥಳೀಯ ಸುದ್ದಿ

ಬದುಕಿಗೆ ಬಹುದೊಡ್ಡ ದಾರಿ ತೋರಿಸಿದ ಗುರು

ಧಾರವಾಡ.

ಚಿಂದಿ ಆಯುವ ಬಾಲಕಿ ಜೀವನ ಬದಲಿಸಿತು ಆ ಒಂದು ಮಾತು

ಹೌದು ಜೀವನದಲ್ಲಿ ಬದಲಾವಣೆ ಅನ್ನೊದು ಯಾವಾಗ ಹೇಗೆ ಆಗುತ್ತೆ ಎನ್ನುವುದು ಗೊತ್ತಾಗೊದಿಲ್ಲಾ.

ಇಂತಹದೊಂದು ಮಹತ್ವದ ಬದಲಾವಣೆ ಕಂಡಿರುವ ಒಬ್ಬ ಹೆಣ್ಣುಮಗಳ ಸ್ಟೋರಿ ನಮ್ಮ ಪವರ್ ಸಿಟಿ ನ್ಯೂಸನಲ್ಲಿ ನಾವು ತೊರಿಸ್ತಾ ಇದ್ದೇವೆ ನೋಡಿ.

ಗೋಸಾವಿ ಜನಾಂಗ ಎನ್ನುವುದು ಶಿವಾಜಿ ಸೇನೆಯಲ್ಲಿದ್ದ, ಮರಾಠಾ ಸೇನೆಯ ಮೂಲ.

ಈ ಜನಾಂಗದವರು ಕರ್ನಾಟಕದಲ್ಲಿ ಇರುವುದು ಬಹಳ ವಿರಳ, ಇವರಲ್ಲಿ ಗಂಡಸರು ಮೀನು ಹಿಡಿಯುವುದು ಹಾಗೂ ಜೇನು ಬಿಡಿಸುವ ಕೆಲಸವನ್ನು ಮಾಡ್ತಾರೆ. ಉಳಿದಂತೆ ಮಹಿಳೆಯರು ಪ್ಲಾಸ್ಟಿಕ್ ಹಾಗೂ ಚಿಂದಿಯನ್ನು ಮಹಾನಗರಗಳಲ್ಲಿ ಆಯ್ದು ಜೀವನ ಸಾಗಿಸುತ್ತಾರೆ.

ಇವರ ಜನಾಂಗದಲ್ಲಿ ಅಭಿವೃದ್ಧಿ ಎನ್ನುವುದು ಇಲ್ಲವೇ ಇಲ್ಲಾ. ಆದ್ರೆ ಸುಮಾರು 75 ವರ್ಷದ ಬಳಿಕ ಸ್ವಾತಂತ್ರ್ಯ ಸಿಕ್ಕ ನಂತರ ಈ ಜನಾಂಗದ ಮಹಿಳೆಯೊಬ್ಬರು ಸಾಧನೆ ಮಾಡುವುದರ ಜೋತೆಗೆ ಜೀವನದ ಟರ್ನಿಂಗ್ ಪಾಯಿಂಟ್ ಗೆ ತಲುಪಿದ್ದಾರೆ.

ಅಂದಹಾಗೆ ಇವತ್ತಿನ ಸ್ಟೋರಿಯ ಹೆಣ್ಣು ಮಗಳು ಪ್ರಕಾಶ ಗೋಸಾವಿ ಹಾಗೂ ಸುಶೀಲಾ ಗೋಸಾವಿ ಅವರ ಮಗಳು ಇವರೇ ಜ್ಯೋತಿ ಅಂತಾ..

ಧಾರವಾಡ ನಿವಾಸಿಯಾಗಿದ್ದ ಇವರ ಮನೆಯನ್ನು ಹುಬ್ಬಳ್ಳಿಯಲ್ಲಿ ಕೆಲವು ವರ್ಷಗಳ ಹಿಂದೆ ರೌಡಿಗಳು ಕೆಡವಿ ಹಾಕ್ತಾರೆ. ಆದ್ರೆ ಅದೇ ರೌಡಿಗಳಿಂದ ಅನ್ಯಾಯ ಅನುಭವಿಸಿದ ಬಳಿಕ ಸಮಾಜಕ್ಕೆ ಅನ್ಯಾಯವಾಗುದನ್ನು ತಡೆಯಲು ತಾವು ಮುಂದೆ ಜನರ ಧ್ವನಿಯಾಗಿ ನಿಲ್ಲಬೇಕು ಎನ್ನುವ ಛಲದೊಂದಿದೆ ಇವರು ಒಂದು‌ ನಿರ್ಧಾರ ಕೈಗೊಳ್ಳುತ್ತಾರೆ ಅದುವೇ ಇವರ ಜೀವನ ಜರ್ನಿಗೆ ಮೇಜರ್ ಟರ್ನಿಂಗ್ ಪಾಯಿಂಟ್.

ಈ ಹೆಣ್ಣುಮಗಳು ಕಡು ಬಡತನದಲ್ಲಿ ಪೋಷಕರೊಂದಿಗೆ ಗೋವಾಕ್ಕೆ ಹೋಗಿ ಅಲ್ಲಿಯೇ ಕಷ್ಟಪಟ್ಟು ವ್ಯಾಸಾಂಗ ಮಾಡಿ,
ಎಲ್ಎಲಬಿ ಓದಿ ವಕೀಲರಾಗಿ ಕೆಲಸ ಮಾಡಿ ಅಂದುಕೊಂಡಿದ್ದ ಸಾಧನೆಯನ್ನು ಮಾಡಿ ತೋರಿಸಿದ್ದಾಳೆ.

ಸಧ್ಯ ಅಂದು ಮನೆ ಬಿಟ್ಟು ಹೋಗುವಾಗ ವಕೀಲರಾದ ಅರುಣ ಜೋಶಿ ಅವರನ್ನ ಸಂಪರ್ಕ ಮಾಡಿದ್ದ ಇವರಿಗೆ, ಅವರು ಹೇಳಿದ್ದ ಆ ಒಂದು ಮಾತಿನಿಂದ ಜೀವನವೇ ಬದಲಿ ಆಗಿದೆ.

ಅಂದು ವಕೀಲರಾದ ಶ್ರೀ ಅರುಣ ಜೋಶಿ ಅವರು ಬುದ್ದಿವಾದ ಹೇಳಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ಹೇಳಿದ್ರು.

ಹೀಗೆ ಸಾಧನೆ ಮಾಡಿರುವ ಜ್ಯೋತಿ ಕುಟುಂಬ ಸಮೇತ ಬಂದು ವಕೀಲರಿಗೆ ಕೃತಜ್ಞತೆ ಸಲ್ಲಿಸಿ‌ ಸ್ವೀಟ್ ಕೊಟ್ಟರು.
ನಾನು ಯಾವತ್ತಿಗೂ ವಕೀಲರಿಗೆ ಚಿರ ಋಣಿ ಅಂತಾರೆ ಜ್ಯೋತಿ..

ಇನ್ನು‌ಜ್ಯೋತಿ ಅವರ ತಂದೆ ಕಷ್ಟದ ದಿನಗಳನ್ನು ನೆನೆಸಿಕೊಂಡು ಕಣ್ಣಿರಾದ್ರು.

ಜ್ಯೋತಿ ಸಂಬಂಧಿಕರು ತಮ್ಮ ಮನೆ ಮಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಅದೇನೆ ಆಗಲಿ ಸಾಧಿಸುವ ಛಲ ಒಂದಿದ್ದರೆ ಜೀವನದಲ್ಲಿ ಏನನ್ನಾದ್ರೂ ಮಾಡಿ ತೋರಿಸಬಹುದು ಎನ್ನುವುದಕ್ಕೆ ಈ ಜ್ಯೋತಿ ಎನ್ನುವ ವಕೀಲೆ ಸಾಕ್ಷಿ…

ಪವರ್ ಸಿಟಿ ನ್ಯೂಸ್ ಕನ್ನಡ ಸತ್ಯ ಸದಾಕಾಲ

Related Articles

Leave a Reply

Your email address will not be published. Required fields are marked *

Back to top button