71 ಕ್ಷೇತ್ರದಲ್ಲಿ ಶುರುವಾಗಿದೆ ಅಭಿವೃದ್ಧಿ ಪರ್ವ
ಧಾರವಾಡ
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಶಾಸಕರಾದ ಅಮೃತ ದೇಸಾಯಿಯವರು ಚಾಲನೆ ನೀಡಿದರು.
ಈ ವೇಳೆ ತಡಕೋಡ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಸಾಕಷ್ಟು ಅನುದಾನ ತರಲಾಗಿದ್ದು, ಹಂತ ಹಂತವಾಗಿ ಆದ್ಯತೆ ಹಾಗೂ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಇದೇ ವೇಳೆ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ ಮಾಡಿದರು.
ನಂತರ ತಡಕೋಡ ಗ್ರಾಮದಲ್ಲಿ ಎಸ್ ಸಿ ಕಾಲೊನಿ ಕೂಡುವ ಎಸ್ ಸಿ ಕಾಲೊನಿಯಲ್ಲಿ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿ,
ಕಲ್ಲೂರ ಗ್ರಾಮದಲ್ಲಿ ಶ್ರೀ ಉಡಚಮ್ಮದೇವಿ ಮಹಾದ್ವಾರ ನಿರ್ಮಾಣ ಕಾಮಗಾರಿ,
ಕಲ್ಲೂರ ಗ್ರಾಮದಲ್ಲಿ ಎಸ್ ಸಿ ಕಾಲೋನಿ ಕೂಡುವ ಎಸ್ ಸಿ ಕಾಲೋನಿಯಲ್ಲಿ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿ ಹಾಗೂ
ಕಲ್ಲೂರ ಗ್ರಾಮದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಮಾಡಿದರು.
ಧಾರವಾಡ ತಾಲೂಕಿನ ಕಲ್ಲೂರ-ದೊಡವಾದ ರಸ್ತೆಯಿಂದ ಗುಡಿಕೊಪ್ಪ ತಾಲೂಕ ಹದ್ದಿನ ವರೆಗೆ ರಸ್ತೆ ಸುಧಾರಣೆ.
ಗರಗದ ಶ್ರೀ ಮಡಿವಾಳೇಶ್ವರರ್ ಕಲ್ಮಠದ ಹತ್ತಿರ ನಡೆಯುತ್ತಿರುವ ತುಪ್ಪರಿ ಹಳ್ಳದ ಕಾಮಗಾರಿಯನ್ನು ಶಾಸಕರಾದ ಅಮೃತ ದೇಸಾಯಿ ವೀಕ್ಷಣೆ ಮಾಡಿದರು.
ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಹಾಜರಿದ್ದರು.