ಸ್ಥಳೀಯ ಸುದ್ದಿ
4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಶಿವಮೊಗ್ಗ
ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಅಲ್ಮಾಜ್ ಬಾನು ಎಂಬುವರು 4 ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಭದ್ರಾವತಿ ತಾಲೂಕಿನ ತಡಸಾ ಗ್ರಾಮ ಆರೀಫ ಎನ್ನುವರ ಪತ್ನಿ 4 ಮಕ್ಕಳಿಗೆ ಜನ್ಮ ನೀಡಿದ್ದು, ಮಕ್ಕಳು ಆರೋಗ್ಯವಾಗಿದ್ದಾರೆ.
5.12 ಲಕ್ಷ ಮಂದಿಯಲ್ಲಿ ಈ ರೀತಿಯಲ್ಲಿ ಮಕ್ಕಳು ಜನಿಸುವುದು ಬಹಳಷ್ಟು ವಿರಳ ಅಂತಾರೆ ವೈದ್ಯರು.
ಹೆರಿಗೆ ಆಸ್ಪತ್ರೆಯ ಹಿರಿಯ ಪ್ರಸೂತಿ ವೈದ್ಯೆ ಡಾ.ಚೇತನಾ ಹಾಗೂ ಅವರ ತಂಡ ಈ ಯಶಸ್ವಿ ಆಪರೇಶನ್ ಮಾಡಿದ್ದು, 2 ಗಂಡು ಮಕ್ಕಳು, ಹಾಗೂ 2 ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಾರೆ.