ಸ್ಥಳೀಯ ಸುದ್ದಿ
250 ಕ್ಕೂ ಪ್ರತಿಭಟನಾ ನಿರತರು ಪೊಲೀಸರ ವಶಕ್ಕೆ
ಧಾರವಾಡ
ಜಲಮಂಡಳಿ ಗುತ್ತಿಗೆ ಆಧಾರಿತ ಕಾರ್ಮಿಕರು ವೇತನ ಹಾಗೂ ಪುನರ್ ನೇಮಕಾತಿಯ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ರು.
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ರವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು,
ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಇಂದು ಸುಮಾರು 250 ಕ್ಕೂ ಹೆಚ್ಚು ಜನರನ್ನು ಪೊಲೀಸರು ಮುಂಜಾಗೃತೆ ಕ್ರಮವಾಗಿ ವಶಕ್ಕೆ ಪಡೆದ್ರು.
ನಗರದ ಹೊರವಯಲದಲ್ಲಿರುವ ಪೊಲೀಸ್ ಹೆಡಕ್ವಾಟರ್ಸನಲ್ಲಿರುವ ದುರ್ಗಮ್ಮಾ ದೇವಸ್ಥಾನದಲ್ಲಿ ಎಲ್ಲರನ್ನು ಇರಿಸಲಾಗಿದೆ.