2 ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಧಾರವಾಡ
ಹತ್ತು ಹಲವು ವಿಶೇಷಗಳಿಗೆ ಸಾಕ್ಷಿಯಾಗಿರುವ ಧಾರವಾಡ ಜಿಲ್ಲೆ ಇದೀಗ ವೈದ್ಯಕೀಯ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡುತ್ತಿದೆ.
ಶ್ರವಣ ದೋಷವುಳ್ಳ ನಗರ ನಿವಾಸಿ ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಏಕಕಾಲಕ್ಕೆ ಎರಡೂ ಕಿವಿಗಳಿಗೆ ಕೋಕ್ಲಿಯರ್ ಇಂಪ್ಲಾಂಟ್(Bilateral Cochlear Implant) ಮಾಡುವಲ್ಲಿ ಇಲ್ಲಿನ ಯುನಿಟಿ ಸೂಪರ್ ಸ್ಪೆಶಲ್ಟಿ ಆಸ್ಪತ್ರೆಯಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.
ಸತತ ಐದು ಗಂಟೆ ನಡೆದ ಈ ಶಸ್ತರ ಚಿಕಿತ್ಸೆ ವಿಶೇಷವಾಗಿದೆ.
ಕೋಕ್ಲಿಯರ್ ಇಂಪ್ಲಾಂಟ್‍ನಲ್ಲಿ ಎಲೆಕ್ಟ್ರಾನಿಕ್ ಯಂತ್ರವನ್ನು ಕಿವಿಯೊಳಗೆ ಅಳವಡಿಸಲಾಗುತ್ತದೆ.
ಇದರಿಂದ ಕಿವಿ ಸ್ಪಷ್ಟವಾಗಿ ಕೇಳುತ್ತದೆ. ಶ್ರವಣದೋಷ ನಿವಾರಣೆಗೆ ಇದು ಅತ್ಯಂಕ ಉತ್ಕೃಷ್ಟ ಚಿಕಿತ್ಸಾ ಕ್ರಮವಾಗಿದೆ. ಇಂತಹ ಇಂಪ್ಲಾಂಟ್ ಮಾಡಿದ ಉತ್ತರ ಕರ್ನಾಟಕದ ಏಕೈಕ ಜಿಲ್ಲೆಯ ಖ್ಯಾತಿಗೆ ಧಾರವಾಡ ಪಾತ್ರವಾಗಿದೆ. ಖ್ಯಾತ ವೈದ್ಯ ಹಾಗೂ ಅಸೋಸಿಯೇಶನ್ ಆಫ್ ಒಟೋಲ್ಯಾರಿಂಗೊಲೋಜಿಸ್ಟ್ ಆಫ್ ಇಂಡಿಯಾದ ಚುನಾಯಿತ ಅಧ್ಯಕ್ಷ ಡಾ. ಶಂಕರ ಮಡಿಕೇರಿ ಮತ್ತು ನಗರದ ಯುನಿಟಿ ಸೂಪರ್ ಸ್ಪೆಶಲ್ಟಿ ಆಸ್ಪತ್ರೆಯ ಕಿವಿ, ಮುಗು, ಮತ್ತು ಗಂಟಲು (ENT) ತಜ್ಞರಾದ ಡಾ. ಅನಿಕೇತ ಪಾಂಡುರಂಗಿ ಈ ಇಂಪ್ಲಾಂಟ್‍ನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಇದರಿಂದ ಮಕ್ಕಳಲ್ಲಿ ಶ್ರವಣ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಕಾಲಕ್ರಮೇಣ ಸಾಮಾನ್ಯರಂತೆ ಕಿವಿ ಕೇಳಲು ಆರಂಭವಾಗುತ್ತದೆ. ಸಾವಿರಕ್ಕೆ 4 ರಿಂದ 6 ಮಕ್ಕಳು ಈ ರೀತಿ ಹುಟ್ಟಿನಿಂದಲೇ ಶ್ರವಣ ದೋಷ ಹೊಂದಿರುತ್ತಾರೆ. ಇಂಥವರಿಗೆ ಕೋಕ್ಲಿಯರ್ ಇಂಪ್ಲಾಂಟ್ ಸೂಕ್ತ ಚಿಕಿತ್ಸಾಕ್ರಮವಾಗಿದೆ ಎನ್ನುತ್ತಾರೆ ಡಾ. ಮಡಿಕೇರಿ ಹಾಗೂ ಡಾ. ಅನಿಕೇತ ಪಾಂಡುರಂಗಿ. ಹುಟ್ಟಿದಾರಭ್ಯ ಯಾವುದೇ ಶಬ್ದವನ್ನೇ ಕೇಳದ ಈ ಮಗುವಿನ ಪಾಲಿಗೆ ಇದೊಂದು ದೊಡ್ಡ ವರದಾನವಿದ್ದಂತೆ. ಖಾಸಗಿ ಆಸ್ಪತ್ರೆಯಲ್ಲಿ ಈ ಮಾದರಿ ಕೋಕ್ಲಿಯರ್ ಇಂಪ್ಲಾಂಟ್ ಮಾಡಿರವುದು ಇಡೀ ಉತ್ತರ ಕರ್ನಾಟಕದಲ್ಲೇ ಇದೇ ಮೊದಲು ಬಾರಿ ಎಂದು ಡಾ. ಅನಿಕೇತ ಪಾಂಡುರಂಗಿ ಹೆಮ್ಮೆಯಿಂದ ಹೇಳುತ್ತಾರೆ.
ಮಾ.12ರಂದು ನಡೆದ ಕೋಕ್ಲಿಯರ್ ಇಂಪ್ಲಾಂಟ್ ತಂಡದಲ್ಲಿ ಮಕ್ಕಳ ತಜ್ಞರು, ಮನೋವೈದ್ಯರು, ಆಡಿಯೋಲಾಜಿಸ್ಟ, ಅನಸ್ಥೀಸಿಯೋಲಾಜಿಸ್ಟ, ರೇಡಿಯಾಲಾಜಿಸ್ಟಗಳು, ಮತ್ತು ಸಹಕರ್ಮಿಗಳು ಕೂಡ ಇದ್ದರು. ಎರಡೂ ಕಿವಿಗಳಿಗೆ ಏಕಕಾಲಕ್ಕೆ ಯಂತ್ರ ಅಳವಡಿಸುವ ಈ ಚಿಕಿತ್ಸಾ ವಿಧಾನಕ್ಕೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರಕಾರದಿಂದ ರಿಯಾಯಿತಿ ಸೌಲಭ್ಯ ಕೊಡಬೇಕೆಂದು ಯುನಿಟಿ ಸೂಪರ್ ಸ್ಪೆಶಲ್ಟಿ ಆಸ್ಪತ್ರೆಯಿಂದ ಸರಕಾರಕ್ಕೆ ಮನವಿ ಮಾಡಿಕೊಳ್ಳಳಾಗಿದೆ.
“ ಕೋಕ್ಲಿಯರ್ ಇಂಪ್ಲಾಂಟ್ ನಮಗೆ ಸವಾಲಿನ ಕೆಲಸವಾಗಿತ್ತು. ಆದರೆ ಯಶಸ್ವಿಯಾಗಿ ನಿರ್ವಹಿಸಿದ ಹೆಮ್ಮೆ ನಮ್ಮದಾಗಿದೆ. ಜನ್ಮತಃ ಶ್ರವಣ ಭಾಗ್ಯವನ್ನೇ ಹೊಂದಿರದ ಮಗುವಿಗೆ ಈ ಚಿಕಿತ್ಸಾ ಕ್ರಮ ಅಪರೂಪದ್ದಾಗಿದೆ. ಇದಾದ ನಂತರ ಮಗುವಿಗೆ ಮಾತು ಬರಲು ಕೂಡ ಆಡಿಯೋ ವರ್ಬಲ್ ಥೆರಪಿ(AVT) ಕೂಡ ಮಾಡಲಾಗುವುದು”
-ಡಾ.ಅನಿಕೇತ ಪಾಂಡುರಂಗಿ