ಸ್ಥಳೀಯ ಸುದ್ದಿ
2 ಕೋಟಿ 30 ಲಕ್ಷದಲ್ಲಿ ಹೈಟೆಕ್ ಆಗಲಿದೆ ಧಾರವಾಡದ ಕಲಾಭವನ
ಧಾರವಾಡ
ಧಾರವಾಡದ ಕಡಪಾ ಮೈದಾನವನ್ನು ಮೇಲ್ದರ್ಜೆಗೆರಿಸುವ ಸಲುವಾಗಿ ನೀಲನಕ್ಷೆ ಸಿದ್ಧವಾಗಿದ್ದು, ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ರು.
ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ ಅವರೊಂದಿಗೆ ಚರ್ಚಿಸಿದ ಮೇಯರ್, ಅಂದಾಜು 2 ಕೋಟಿ 30 ಲಕ್ಷ ವೆಚ್ಚದಲ್ಲಿ ಕಡಪಾ ಮೈದಾನವನ್ನು ಎತ್ತರಗೊಳಿಸಿ ಸಮತೋಲನಗೊಳಿಸುವುದು,ಹಾಗೂ ಆವರಣ ಸುತ್ತಲೂ ಎತ್ತರದ ಗೋಡೆಗಳನ್ನು ನಿರ್ಮಿಸುವುದು,
ಬಸವೇಶ್ವರ ಮೂರ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಶ್ರೀ ದ.ರಾ. ಬೇಂದ್ರೆ ರವರ ಪುತ್ತಳಿಯ ಸುತ್ತಲೂ ಲಾನ್ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗರಿಗಳನ್ನು ಕೈಗೊಳ್ಳುವ ಕುರಿತು ಸ್ಥಳ ಪರಿಶೀಲನೆ ಮಾಡಿದ್ರು.
ಕಸ ವಿಲೇವಾರಿ ಮಾಡುವ ವಾಹನಗಳನ್ನು ಸಂಬಂಧಪಟ್ಟ ವಲಯಗಳಿಗೆ ಹಸ್ತಾಂತರಿಸುವ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ವಲಯ ಸಹಾಯಕ ಆಯುಕ್ತರಾದ ಆರ್.ಎಂ. ಕುಲಕರ್ಣಿ ರವರು, ಪಾಲಿಕೆಯ ಅಧಿಕಾರಿಗಳಾದ ರಾಜೇಶ, ಪ್ರಕಾಶ ಇನ್ನಿತರರು ಉಪಸ್ಥಿತರಿದ್ದರು.