ಸ್ಥಳೀಯ ಸುದ್ದಿ
2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ
ಧಾರವಾಡ
ಧಾರವಾಡ ತಾಲೂಕಿನ ಬೇಲೂರ ಗ್ರಾಮದಲ್ಲಿ
ಲೋಕೋಪಯೋಗಿ ಇಲಾಖೆಯ 2021-22ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಅಪೆಂಡಿಕ್ಸ್-ಇ ಯೋಜನೆ ಅಡಿ ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾಡ ತಾಲೂಕಿನ ಬೇಲೂರ ಎನ್.ಎಚ್ -4 ರಿಂದ ಬೇಲೂರು ಗ್ರಾಮದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯಕ್ರಮಕ್ಕೆ ಧಾರವಾಡ ಶಾಸಕರಾದ ಅಮೃತ ದೇಸಾಯಿಯವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವೈಶಾಲಿ ಹುಲಂಬಿ, ಬಸವರಾಜ ಚಿಕ್ಕನ್ನವರ, ಶಿವರಾಜಕುಮಾರ ಕುರಿ, ಯಲ್ಲಪ್ಪ ಕಡ್ಲಿ, ಗಂಗಮ್ಮ ಬಜೇಂತ್ರಿ, ಸದಸ್ಯರು ಬಸಪ್ಪ ಹೆಗ್ಗೇರಿ, ಜಲದೇವ ಹೆಗ್ಗೇರಿ, ಬಸಯ್ಯ ಕಳ್ಳಿಮಠ, ಶಿವಯ್ಯ ಚಿಕ್ಕಮಠ, ಕಲ್ಲಪ್ಪ ಸಂದೂರಿ, ಸಂತೋಷ ಬಡವನ್ನವರ ಮಡಿವಾಳಪ್ಪ ಗಾಳಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.