ಸ್ಥಳೀಯ ಸುದ್ದಿ
ನೂತನ ನವೀಕೃತ ರೈಲ್ವೆ ನಿಲ್ದಾಣ ಕಾಮಗಾರಿ ಪರಿಶೀಲನೆ
ಧಾರವಾಡ
ಅಕ್ಟೋಬರ್ 11 ಕ್ಕೆ ಧಾರವಾಡ ರೈಲ್ವೆ ನಿಲ್ದಾಣ ಪುನಾರಾಭಿವೃದ್ದಿ ಕಾರ್ಯಕ್ರಮ ಇದ್ದು, ಕೇಂದ್ರ ರೈಲ್ವೆ ಸಚಿವ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಮೇಲ್ದರ್ಜೆಗೆರಿದ ರೈಲು ನಿಲ್ದಾಣದ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಯ ಕಾಮಗಾರಿಯನ್ನು ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಲ್ಹಾದ ಜೋಷಿ ರವರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ, ಪಾಲಿಕೆಯ ಸದಸ್ಯರಾದ ಸುರೇಶ ಬೆದರೆ, ಜ್ಯೋತಿ ಪಾಟೀಲ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ ಹಾಗೂ ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತವನಪ್ಪ ಅಷ್ಟಗಿ ರವರು, ಸುನಿಲ್ ಮೊರೆ, ಶ್ರೀನಿವಾಸ ಕೋಟ್ಯನ್ ಸೇರಿದಂತೆ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.