15 ಗಂಟೆಗಳ ನಿರಂತರ ಕಾರ್ಯಾಚರಣೆ ನಂತರ ರಾಷ್ಟ್ರೀಯ ಹೆದ್ದಾರಿ ಕ್ಲೀಯರ್
ಧಾರವಾಡ
ಧಾರವಾಡ ಹೈಕೋರ್ಟ್ ಮುಂಭಾಗದಲ್ಲಿ ರಾಷ್ಟೀಯ ಹೆದ್ದಾರಿ 4 ರಲ್ಲಿ ಅಂಡರಬ್ರಿಡ್ಜ್ ಕೆಳಗಡೆ ಸಿಲುಕಿದ್ದ ಗ್ಯಾಸ ಟ್ಯಾಂಕರ್ ವಾಹನದಿಂದ ಗ್ಯಾಸ್ ಲಿಕೇಜ್ ಆಗಿದ್ದ ಪರಿಣಾಮ, ರಾಷ್ಟ್ರೀಯ ಹೆದ್ದಾರಿ ಬರೋಬ್ಬರಿ 15 ಗಂಟೆಗಳ ಕಾಲ ಬಂದ ಆಗಿತ್ತು. ನಂತರ 11 ಗಂಟೆ ಸುಮಾರಿಗೆ ಹೆದ್ದಾರಿ ಪ್ರಾರಂಭ ಆಯಿತು.
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಆದಂತಹ ಪ್ರಕರಣದಿಂದ ಬರೋಬ್ಬರಿ 4 km ಟ್ರಾಫಿಕ್ ಜಾಮ ಆಗಿತ್ತು..
ನಿನ್ನೆ ಅಮವಾಸ್ಯೆ ದಿನ ಗ್ಯಾಸ್ ಸಿಲಿಂಡರ್ ವಾಹನ ಸ್ಪೋಟ ಆಗಿದ್ದರೆ ಸುತ್ತಲೂ ದೊಡ್ಡ ಅನಾಹುತವೇ ಆಗುತ್ತಿತ್ತು.
ಅದೃಷ್ಟವಶಾತ್ ಅಂತಹ ದೊಡ್ಡ ದುರಂತವನ್ನು ಧಾರವಾಡ ಜಿಲ್ಲೆಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಯಶಸ್ವಿ ಕಾರ್ಯಾಚರಣೆ ಮಾಡಿದೆ.
ಇದರಿಂದ ಧಾರವಾಡದ ಐಐಟಿ ವಿದ್ಯಾರ್ಥಿಗಳು ಸಿಬ್ಬಂದಿ ಹಾಗೂ ಹೈಕೋರ್ಟ್ ಸಿಬ್ಬಂದಿ ನಿಟ್ಡುಸಿರು ಬಿಟ್ಟಿದ್ದಾರೆ.
ಸಂಜೆ 7 ಗಂಟೆಯಿಂದಲೇ ರಾಷ್ಟ್ರೀಯ ಹೆದ್ದಾರಿ ರಸ್ತೆ ಮೇಲೆ ಊಟವಿಲ್ಲದೇ ಹೊರ ರಾಜ್ಯದ ವಾಹನ ಚಾಲಕರು ಕುಳಿತಿದ್ದರು.
ಇನ್ನು ಮುಂದೆ ಹೋಗದೇ ಹೈಕೋರ್ಟ್ ಮುಂದೆ ಹೆದ್ದಾರಿಯಲ್ಲಿ ಲಾರಿ ಮಾಲೀಕರು ಪಾತ್ರೆ ತೊಳೆದ್ರು.
ಪೆಟ್ರೋಲ್ ಬಂಕ್ ಹೊಟೆಲಗಳು ಕೂಡ ಬಂದ ಆಗಿದ್ದವು.
ವಿದ್ಯುತ್ ಸಂಪರ್ಕ ಖಡಿತವಾಗಿತ್ತು. ಮನೆಗಳಲ್ಲಿ ಹಾಗೂ ಹೊಟೆಲಗಳಲ್ಲಿ ಒಲೆ ಹಾಗೂ ಗ್ಯಾಸ ಹಚ್ಚದಂತೆ ಪೊಲೀಸರು ಸೂಚಿಸಿದ್ದರು.
ಬೇಲೂರು ಸುತ್ತಮುತ್ತಲಿನ ಕೈಗಾರಿಕೆಗಳು ಬಂದ ಆಗಿದ್ದವು. ಕಾರ್ಮಿಕರಿಗೆ ರಜೆ ಕೊಡಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ದೇವಸ್ಥಾನವೂ ಬಂದ ಆಗಿದ್ದವು.