ಸ್ಥಳೀಯ ಸುದ್ದಿ
10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಬೆಂಗಳೂರು: ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಶಾಲೆಯಲ್ಲೇ 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದೆ. ವರ್ತೂರು ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿದ್ದು ವರ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲಾ ಸಂಸ್ಥಾಪಕ ಮತ್ತು ಪ್ರಾಂಶುಪಾಲನಾಗಿರುವ ವ್ಯಕ್ತಿಯೇ ಕೃತ್ಯ ಎಸಗಿರುವ ಆರೋಪ ಕೇಳಿ ಬಂದಿದೆ.ನಿನ್ನೆ ಎಂದಿನಂತೆ 10 ವರ್ಷದ ಬಾಲಕಿ ಶಾಲೆಗೆ ತೆರಳಿದ್ದಳು. ಶಾಲೆಗೆ ಬಂದ ಬಾಲಕಿಯನ್ನು ಕಂಡ ಕಾಮುಕ ಪ್ರಾಂಶುಪಾಲ ಬಾಲಕಿಯನ್ನು ಖಾಲಿ ರೂಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮನೆಗೆ ಬಂದ ಮಗಳು ನೋವು ತಾಳದೆ ಒದ್ದಾಡಿದನ್ನು ಕಂಡ ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಈ ವೇಳೆ ಕೃತ್ಯ ಬಯಲಾಗಿದೆ. ವರ್ತೂರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.