ಸ್ಥಳೀಯ ಸುದ್ದಿ

1 ವರ್ಷದ ಪರಿಶ್ರಮಕ್ಕೆ ಸಿಕ್ತು ಹಾಫ್ ಐರನ್ ಮ್ಯಾನ್ ಗರಿ

ಧಾರವಾಡ

ಪೊಲೀಸ್ ಇಲಾಖೆ ಅಂದ್ರೆ ಸದಾಕಾಲ ಒತ್ತಡದ ಬಿಡುವಿಲ್ಲದ ನೌಕರಿ. ಇವೆಲ್ಲವುಗಳ ನಡುವೆ ಇಲ್ಲೊಬ್ಬ ಪೊಲೀಸ್ ಪೇದೆ ರಾಜ್ಯದ ಪೊಲೀಸ್ ಇಲಾಖೆ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಬಾಡಿಗೆ ಸೈಕಲ್ ಪಡೆದು ಮಾಡಿರುವ ಸಾಧನೆ ಇದು.
ಇವರ ಸಾಧನೆಗೆ ಇದೀಗ ಸೈನಿಕರು, ಪೊಲೀಸರು, ಶಿಕ್ಷಕರು ಹಾಗೂ ಅಗ್ನಿಶಾಮಕದಳದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರೇ ಆ ಪೊಲೀಸ್ ಪೇದೆ ಮಾಡಿರುವ ಸಾಧನೆಯಾದ್ರು ಏನು ಅಂತೀರಾ ಈ ಸ್ಪೆಷಲ್ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ….

ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾದ ಮುರುಗೇಶ ಚೆನ್ನಣ್ಣವರ್ ಅವರು ಕ್ರೀಡಾ ಕ್ಷೇತ್ರದಲ್ಲಿ ಐರನಮ್ಯಾನ್ ಆಗಿ ಸಾಧನೆ ಮಾಡಿದ್ದರು.

ಈ ಪೊಲೀಸ್ ಅಧಿಕಾರಿ ರೀತಿಯೇ ಇನ್ನೊಬ್ಬ ಪೊಲೀಸ್ ಪೇದೆ ಬಿಡುವಿನ ಸಮಯದಲ್ಲಿ ಸತತ 1 ವರ್ಷ ಶ್ರಮವಹಿಸಿ ಕ್ರೀಡಾ ಕ್ಷೇತ್ರದಲ್ಲಿ ಹಾಫ್ ಐರನ್ ಮ್ಯಾನ್ ಆಗಿ ಸಾಧನೆ ಮಾಡಿದ್ದಾರೆ. ಅವರೇ ನಮ್ಮ
ಗಂಡು ಮೆಟ್ಟಿದ ನಾಡಿನ ಪೊಲೀಸ್ ಪೇದೆ ಕಿರಣ ಗಾಣಿಗೇರ ಅಂತಾ, 2007 ರ ಬ್ಯಾಚ್ ಪೊಲೀಸ ಪೇದೆ ಕಿರಣ ಅವರು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಶನರೇಟ್ ವಿಭಾಗದಲ್ಲಿ CSB ( crime special Brach) ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ಇದೇ ಕಮೀಶನರೇಟ್ ವ್ಯಾಪ್ತಿಯ ಇಬ್ಬರು ಪೊಲೀಸರು ಬ್ಯಾಂಕ್ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದಿದ್ದಾಗ,
ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ ಸೂದ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಇವರ ಸಾಧನೆಗೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಆತ್ಮೀಯರು ಅಭಿನಂದನೆ‌ ಸಲ್ಲಿಸಿದ್ದಾರೆ.

ಇವರು ಮಾಡಿರುವ ಸಾಧನೆ ಹೀಗಿದೆ ನೋಡಿ.
1.9 ಕಿ.ಮೀ ಸ್ವಿಮ್ಮಿಂಗ್
90 ಕಿ.ಮೀ ಸೈಕ್ಲಿಂಗ್
ಹಾಗೂ
21.1 ಕಿ.ಮೀ ರನ್ನಿಂಗ್ ಮಾಡಿ, ಹಾಫ ಐರನ್ ಮ್ಯಾನ್ ಆಗಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಕಿರಣ ಅವರು 2007 ರ ಬ್ಯಾಚ್ ಸಿಬ್ಬಂದಿ.
ಹುಬ್ಬಳ್ಳಿಯ ಜಯಪ್ರಕಾಶ ಭರಮಗೌಡರ್ ಹತ್ತಿರ ‌ಕಿರಣ ಗಾಣಿಗೇರ ಅವರು ಬಾಡಿಗೆ ಸೈಕಲ್ ಪಡೆದು ಈ ಸಾಧನೆ ಮಾಡಿದ್ದಾರೆ.
ಕೊಲ್ಲಾಪುರದಲ್ಲಿ ಸುಮಾರು 1 ಸಾವಿರ ಸ್ಫರ್ಧಾಳುಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಎಲ್ಲರು ಹುಬ್ಬೆರುವಂತಹ ಕೆಲಸ ಮಾಡಿ ಪ್ರಶಸ್ತಿ ತಮದಾಗಿಸಿಕೊಂಡಿದ್ದಾರೆ ಕಿರಣ ಅವರು.


7 ಗಂಟೆ 33 ನಿಮಿಷದಲ್ಲಿ
113 ಕಿ.ಮೀ ರನ್ನಿಂಗ್, ಸೈಕ್ಲಿಂಗ್ ಹಾಗೂ ಸೈಕ್ಲಿಂಗ್ ಮಾಡಿ ಸಾಧನೆ ಮಾಡಿದ್ದಾರೆ ಈ ಪೊಲೀಸ್ ಪೇದೆ.
ಇಷ್ಟೆಲ್ಲಾ ಸಾಧನೆ ಮಾಡಲು ಇವರು ತೆಗೆದುಕೊಂಡಿದ್ದ ಸಮಯ ಕೆವಲ 1 ವರ್ಷ.
ಪ್ರಶಸ್ತಿ ಪಡೆದಿರುವ ಕಿರಣ ಗಾಣಿಗೇರ ಅವರಿಗೆ ಎಲ್ಲೇಡೆಯಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

ಅದೇನೆ ಆಗಲಿ ಜೀವನದಲ್ಲಿ ಪೊಲೀಸ್ ಇಲಾಖೆಗೆ ಸೇರಿ ದಿನದ 24 ಗಂಟೆಗಳ ಕಾಲ ಬ್ಯೂಸಿ‌ ಶೆಡ್ಯೂಲ್ ನಲ್ಲಿ ಸಮಯ ಬಿಡುವು ಮಾಡಿಕೊಂಡು ಹಾಫ್ ಐರನಮ್ಯಾನ್ ಆಗಿ ಸಾಧನೆ ಮಾಡಿರುವ ಕಿರಣ ಗಾಣಿಗೇರ ಅವರಿಗೆ ನಮ್ಮ ಪವರ್ ಸಿಟಿ ನ್ಯೂಸ್ ಕನ್ನಡದಿಂದ ಅಭಿನಂದನೆಗಳು. ಇವರು ಇನ್ನಷ್ಟು ಸಾಧನೆ ಮಾಡಿ ಪೊಲೀಸ್ ಇಲಾಖೆ ಗೌರವವನ್ನು ಮತ್ತಷ್ಟು ಹೆಚ್ವಿಸಲಿ ಎನ್ನುವುದು ನಮ್ಮ ಅಭಿಲಾಷೆ..

Related Articles

Leave a Reply

Your email address will not be published. Required fields are marked *