ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಪ್ರಯಾಣಿಕರಿಗೆ rtpcr ಅಗತ್ಯ ಇಲ್ಲವೇ ಜಿಲ್ಲಾಧಿಕಾರಿಗಳೆ !
ಹುಬ್ಬಳ್ಳಿ
ಕೋವಿಡ್-19 ಕೊರೊನಾ ಮೂರನೆ ಅಲೆಯಾಗದಂತೆ ಮತ್ತು ಓಮಿಕ್ರಾನ್- ವೈರಸ್ ಹರಡದಂತೆ ತಡೆಗಟ್ಟಲು ಸರ್ಕಾರ ನೈಟ್- ಮತ್ತು ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದೆ.
ಜಿಲ್ಲಾಡಳಿತ ಸಾರ್ವಜನಿಕರಿಗೆ ಒಂದಷ್ಟು ಮಾರ್ಗ ಸೂಚಿ ನೀಡುವ ಮೂಲಕ ಕಟ್ಟು ನಿಟ್ಟಿನ ಪಾಲನೆಗೆ ಮುಂದಾಗಿದೆ.
ಆದರೆ ಹೊರ ರಾಜ್ಯಗಳಿಂದ ಧಾರವಾಡ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ಕುರಿತು ಯಾವ ಕ್ರಮ ಕೈಗೊಂಡಿದೆ ಎನ್ನುವುದರ ಕುರಿತು ಒಂದಷ್ಟು ಗೊಂದಲ ಸೃಷ್ಟಿ ಯಾಗುತ್ತಿದೆ.
ಹಿಗಿರುವಾಗ ಗೋವಾದ ನೊಂದಣಿ ಹೊಂದಿದ್ದ ಕಾರನ್ನು ತಡೆದು ಪ್ರಯಾಣಿಕರನ್ನ ವಿಚಾರಣೆ ನಡೆಸಿದ ಅವಳಿನಗರದ ಸಂಚಾರಿ ಪೊಲಿಸರು. RTPCR ತೋರಿಸಲು ಕೇಳಿದರು. ಇದಕ್ಕೆ ಉತ್ತರಿಸಿದ ಗೋವಾ ಮೂಲದ ವ್ಯಕ್ತಿ ನಾನು ಈಗಾಗಲೇ ಎರಡು ಲಸಿಕೆ ಪಡೆದಿದ್ದೇನೆ. RTPCR ಟೆಸ್ಟ್ ನಾವು ಮಾಡಿಸಿಲ್ಲ. ಎಂದು ಉತ್ತರಿಸಿದ ಗೋವಾ ಮೂಲದ ಈ ಪ್ರಯಾಣಿಕರನ್ನು. ಕರ್ನಾಟಕ ಗಡಿ ಭದ್ರತಾ ಪೊಲಿಸರು ಇವರನ್ನು ರಾಜ್ಯಕ್ಕೆ ಯಾವ ಆಧಾರದ ಮೇಲೆ ಬಿಟ್ರು ? ಮತ್ತು ಇಲ್ಲಿನ ಪೊಲಿಸರು ಇಂತಹ ಹೊರ ರಾಜ್ಯ ಪ್ರಯಾಣಿಕರ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆ? ಎನ್ನುವುದೆ. ಪ್ರಜ್ಞಾವಂತರ ಪ್ರಶ್ನೆ?