ಹೈಕಮಾಂಡ್ ಅಂಗಳದಲ್ಲಿ ಧಾರವಾಡ ಬಿಜೆಪಿ ಅಭ್ಯರ್ಥಿಗಳ ಭವಿಷ್ಯ
ಧಾರವಾಡ
ಧಾರವಾಡ ಜಿಲ್ಲೆಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ತವರು ಜಿಲ್ಲೆಯಾಗಿದ್ದು, ಅಳೆದು ತೂಗಿ, ಜಿಲ್ಲೆಯ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡಗೆ ಕಳುಹಿಸಲಾಗಿದೆ.
ಹಾಲಿ ಸಚಿವ , ಹಾಲಿ ಶಾಸಕರು ಹಾಗೂ ಮಾಜಿ ಸಿಎಂ ಸೇರಿದಂತೆ ಮೇಯರ್ ಭವಿಷ್ಯ ಕೂಡ ಹೈಕಮಾಂಡ್ ನಿರ್ಧಾರ ಮಾಡಲಿದೆ.
ರಾಜ್ಯದ ಕೋರ್ ಕಮೀಟಿ ತಂಡ ಈ ಕೆಳಗಿನ ಹೆಸರುಗಳ ಪಟ್ಟಿ ಯನ್ನು ರವಾನೆ ಮಾಡಿದೆ.
ಹೆಸರುಗಳು ಹೀಗಿವೆ..
ಧಾರವಾಡ ಗ್ರಾಮೀಣ ಅಮೃತ ದೇಸಾಯಿ ಹಾಗೂ ತವನಪ್ಪ ಅಷ್ಟಗಿ
ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಅರವಿಂದ ಬೆಲ್ಲದ ಹಾಗೂ ಈರೇಶ ಅಂಚಟಗೇರಿ
ಹುಬ್ಬಳ್ಳಿ ಪೂರ್ವ ಕ್ಷೇತ್ರಕ್ಕೆ ಬಸವರಾಜ ಅಮ್ಮಿನಭಾವಿ ಹಾಗೂ ಡಾ.ಕ್ರಾಂತಿಕಿರಣ
ಕುಂದಗೋಳ ತಾಲೂಕಿಗೆ
ಎಂ.ಆರ್.ಪಾಟೀಲ ಹಾಗೂ ಚಿಕ್ಕನಗೌಡ್ರ
ಧಾರವಾಡ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರಕ್ಕೆ ಜಗದೀಶ ಶೆಟ್ಟರ್ ಹಾಗೂ ಮಹೇಶ ಟೆಂಗಿನಕಾಯಿ
ಕಲಘಟಗಿ ಕ್ಷೇತ್ರಕ್ಕೆ ನಿಂಬಣ್ಣವರ್ ಹಾಗೂ ಬಸವರಾಜ ಕುಂದಗೋಳಮಠ
ನವಲಗುಂದ ತಾಲೂಕಿಗೆ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಷಣ್ಮುಗಪ್ಪ ಗುರಿಕಾರ
ಇವರಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದು ಬಹುತೇಕ ಕುತೂಹಲ ಮೂಡಿಸಿದೆ.