ಸ್ಥಳೀಯ ಸುದ್ದಿ
ಹಿರೇಕುಂಬಿ ಮೋಹರಂ ಆಚರಣೆಯಲ್ಲಿರುವೆ ಎಂದ ಯಾದವಾಡ ಮಾಜಿ ಗ್ರಾ.ಪಂ ಉಪಾಧ್ಯಕ್ಷೆ.
ಧಾರವಾಡ
ನನಗೆ ನನ್ನ ಗಂಡನ ಊರಾದ ಯಾದವಾಡ ಊರಿನ ಬಗ್ಗೆ ಅಭಿಮಾನವಿದ್ದು, ನಾನು ಕುಟುಂಬ ಸಮೇತವಾಗಿ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಮೋಹರಂ ಆಚರಣೆಗೆ 2 ದಿನಗಳ ಹಿಂದಷ್ಟೇ ಬಂದಿರುವೆ. ಯಾವುದೇ ಅಧಿಕಾರದ ಆಸೆಗಾಗಿ ನಾನೂ ಊರು ಬಿಟ್ಟು ಬೇರೆ ಕಡೆಗೆ ಹೋಗಿಲ್ಲ ಎಂದು ಯಾದವಾಡ ಗ್ರಾಮದ ಗ್ರಾ.ಪಂ ಉಪಾಧ್ಯಕ್ಷೆ ಲಕ್ಷ್ಮಿ ಗಳಗಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಪ್ರತಿ ಬಾರಿಯೂ ಅಧ್ದೂರಿಯಾಗಿ ಆಚರಣೆ ಮಾಡುವ ಮೋಹರಂನಲ್ಲಿ ನಾನು ಯಾದವಾಡ ಊರಿನಲ್ಲಿ ಭಾಗಿಯಾಗುತ್ತೇನೆ. ಈ ಬಾರಿ ಮಕ್ಕಳ ಸಮೇತ ಇಲ್ಲಿಗೆ ಬಂದಿರುವೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಲಕ್ಷ್ಮಿ ಗಳಗಿ ಅವರು.