ಸ್ಥಳೀಯ ಸುದ್ದಿ
ಹಿರಿಯ ಮಾಜಿ ಶಾಸಕ ನಿಂಬಣ್ಣವರ್ ನಿಧನಕ್ಕೆ ಶಾಸಕ ವಿನಯ ಕುಲಕರ್ಣಿ ಸಂತಾಪ
ಕಿತ್ತೂರು
ಧಾರವಾಡ ಜಿಲ್ಲೆಯ ಹಿರಿಯ ಶಾಸಕ ಸಿ.ಎಂ.ನಿಂಬಣ್ಣವರ ನಿಧನಕ್ಕೆ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಸಂತಾಪ ಸೂಚಿಸಿದ್ದು, ಅವರ ಕುಟುಂಬದ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದರು.
ಶಾಸಕ ವಿನಯ ಕುಲಕರ್ಣಿ ಅವರಿಂದ ಸಂತಾಪ
ಕಿತ್ತೂರಿನಲ್ಲಿ ಮಾತನಾಡಿದ ಶಾಸಕ ವಿನಯ ಕುಲಕರ್ಣಿ ಅವರು, ಮಾಜಿ ಶಾಸಕ ನಿಂಬಣ್ಣವರ ಅವರು ವಯಸ್ಸಿನಲ್ಲಿ ಹಿರಿಯರಾದ್ರೂ ಕ್ರೀಯಾಶೀಲರಾಗಿ ಕೆಲಸ ಮಾಡಿಕೊಂಡಿದ್ದರು. ಅವರ ಅಗಲಿಕೆ ನಮಗೆಲ್ಲಾ ನೋವಿನ ಸಂಗತಿ ಎಂದರು.