ಹಾಲಪ್ಪಾ ಆಚಾರ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗೋದು ಬೇಡಾ.
ಧಾರವಾಡ
ಕೊಪ್ಪಳ ಜಿಲ್ಲೆಯ ಶಾಸಕರಾದ ಹಾಲಪ್ಪಾ ಆಚಾರ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.
ಇವರು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಜಿಲ್ಲೆಯಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ.
ಇದು ವಸೂಲಿ ಮಾಡಲು ನಡೆಸಿರುವ ತಂತ್ರ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ನೇರವಾಗಿ ಉಸ್ತುವಾರಿ ಸಚಿವರಾದ ಹಾಲಪ್ಪಾ ಆಚಾರ ಮೇಲೆ ಆರೋಪ ಮಾಡಿದ್ದಾರೆ.
ಧಾರವಾಡದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಚಿಂಚೋರೆ ಅವರು 6 ತಿಂಗಳ ಮೊದಲು ಟ್ರೇಲರ್ ತೋರಿಸಿ, ಇದೀಗ ಪಿಂಚರ್ ತೋರಿಸುವ ಕೆಲಸ ಮಾಡ್ತಾ ಇದ್ದಾರೆ.
ಹುಬ್ಬಳ್ಳಿ ಧಾರವಾಡದಲ್ಲಿ ಸುಮಾರು 2 ಲಕ್ಷ ಬಡಾವಣೆಗಳು ಇವೆ. ಇವುಗಳನ್ನು ಮೊದಲು ಸಕ್ರಮ ಮಾಡುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಗದೀಶ ಶೆಟ್ಟರ ಹಾಗೂ ಶಂಕರ ಪಾಟೀಲ ಮುನೇನಕೊಪ್ಪ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಅವಧಿಯಲ್ಲಿ ಇಲ್ಲದ ತೆರವು ಕಾರ್ಯಾಚರಣೆ ಇದೀಗ ಜೋರಾಗುತ್ತಿದೆ ಎಂದರು.
ಹುಡಾದವರು ಇದರಲ್ಲಿ ಶಾಮೀಲಾಗಿದ್ದಾರೆ.
ಪಾಲಿಕೆಯವರು ಈ ಬಗ್ಗೆ ದ್ವಂದ ಧೋರಣೆ ಅನುಸರಿಸುವುದನ್ನು ಮೊದಲು ಬಿಡಲಿ ಎಂದರು.
ಇದೇ ವೇಳೆ ಸತೀಶ ತುರಮರಿ ಮಾತನಾಡಿ,
ಹುಡಾ ಅಧ್ಯಕ್ಷರು ಮೊದಲು ಶೋ ಮಾಡುವುದನ್ನು ಬಿಡಲಿ. ಕಾಂಗ್ರೆಸ್ ಸರ್ಕಾರ ಇದ್ದಾಗ, ಬಡವರಿಗೆ ಸೈಟುಗಳನ್ನು ಕೊಡಲಾಗಿದೆ. ಬಡವರ ಬಗ್ಗೆ ವಿಚಾರ ಮಾಡಿ ಲೇಔಟ್ ತೆರವು ಮಾಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಆನಂದ
ಸಿಂಗನಾಥ, ಇಮ್ರಾನ್ ಕಳ್ಳಿಮನಿ, ಸತೀಶ ತುರಮರಿ, ಗೌರಮ್ಮ ನಾಡಗೌಡ, ಮೆಹಬೂಬ ಮುಲ್ಲಾನವರ್ , ಸಂತೋಷ ನೀರಲಕಟ್ಟಿ, ನವೀನ ಕದಂ, ಪಾಲಿಕೆ ಸದಸ್ಯರಾದ ಮಟ್ಟಿ ರಾಜು, ಮೈನುದ್ದೀನ ನದಾಫ ಸೇರಿದಂತೆ ಶಿವು ಚೆನ್ನಗೌಡ್ರ, ಬಸವರಾಜ ಕಿತ್ತೂರು,
ಬಸವರಾಜ ಜಾಧವ ಹಾಗೂ ಪಾಲಿಕೆ ಸದಸ್ಯರುಗಳು ಇತರರಿದ್ದರು.