ಸ್ಫರ್ಧೆಯಲ್ಲಿ ವಿಜೇತವಾದ ಧಾರವಾಡ ಜರ್ಮನ್ ಶೆಫರ್ಡ್ ಶ್ವಾನಗಳು
ಬೆಂಗಳೂರು
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ
ಗಡಿಗ್ಲಾಜ್ ಊರಿನಲ್ಲಿ ಆಯೋಜನೆ ಮಾಡಿದ ಶ್ವಾನಗಳ ಸ್ಫರ್ಧೆಯಲ್ಲಿ ಧಾರವಾಡದ ಮಾಲೀಕರು ಸಾಕಿ ಬೆಳೆಸುತ್ತಿರುವ ಶ್ವಾನಗಳು ಎಲ್ಲರ ಗಮನ ಸೆಳೆದು ಬಹುಮಾನ ಪಡೆದಿವೆ.
KCI (ಕೆನಲ್ ಕ್ಲಬ್ ಆಫ್ ಇಂಡಿಯಾ ) ಆಯೋಜನೆ ಮಾಡಿದ್ದ ಈ ವಿಶೇಷ ಸ್ಫರ್ಧೆಯಲ್ಲಿ ಧಾರವಾಡದ ಪೌಲ್ ಎನ್ನುವರ 2 ಶ್ವಾನಗಳು ವಿಭಿನ್ನ ತರಬೇತಿ ಪಡೆದಿರುವ ನಾಯಿಗಳನ್ನು ಹಿಂದಕ್ಕಿವೆ.
ಪ್ರಶಸ್ತಿ ಪಡೆದಿರುವ ಶ್ವಾನಗಳ ಪೈಕಿ ಟೀಂ ಪೌಲ್ ಥಾರ್ ಮಾಲೀಕರಾದ ಡಾ.ನಾಗರಾಜ ನಾಯಕ್ ಶ್ವಾನ ಒಂದಾದ್ರೆ.
ಟೀ ಪೌಲ್ಸ್ ಕ್ಲ್ಯಾರಾ ಅದರ ಮಾಲೀಕರಾದ ವಿಶಾಲ ಅವರ ಶ್ವಾನ ಕೂಡ ಪ್ರಶಸ್ತಿ ಪಡೆದಿದೆ.
ಕರ್ನಾಟಕ ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಅಂದಾಜು 400 ಶ್ವಾನಗಳು ಈ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದವು.
ಅದರಲ್ಲಿ ಹೊರದೇಶದ 20 ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರೂ ಸಹಿತ ಧಾರವಾಡದ ಮಾಲಕರೇ ಸಾಕಿ ಬೆಳೆಸಿದ ಜರ್ಮನ ಶೆಫರ್ಡ ಶ್ವಾನಗಳು ಬಹುಮಾನ ಪಡೆದಿವೆ.
ಬೆಂಗಳೂರು ಮೂಲದ ರಾಜೀವ ಮಂಜುನಾಥ ಹಾಗೂ ಧಾರವಾಡ ಮೂಲದ ರಿತಿಕ ಕಲಾಲ್ ಅವರು, ಅಂರ್ಜಟೈನಾದಿಂದ ಬಂದಿದ್ದ ಅಂತರಾಷ್ಟ್ರೀಯ ನ್ಯಾಯಾಧೀಶರ ಮುಂದೆ ಶ್ವಾನಗಳ ವಿಶೇಷ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ರು.