ಸಿರಿಧಾನ್ಯಗಳ ಆಹಾರ ಉತ್ಪನ್ನ ಘಟಕ ಉದ್ಘಾಟನೆ : ಜಯತೀರ್ಥ ಕಟ್ಟಿ
ಹುಬ್ಬಳ್ಳಿ: ದೈನಂದಿನದ ಒತ್ತಡದ ಇತ್ತೀಚಿನ ದಿನಗಳಲ್ಲಿ ಮಧುಮೇಹ ಮತ್ತು ಬೊಜ್ಜಿನಂತಹ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಮತ್ತು ಅವುಗಳ ಜೊತೆಗಿನ ತೊಂದರೆಗಳೊಂದಿಗೆ, ಬಹುತೇಕ ಸಾಂಕ್ರಾಮಿಕ ಹಂತವನ್ನು ತಲುಪಿದೆ.
ಕೆಲವು ಅಧಿಕ ಆದಾಯದ ದೇಶಗಳಲ್ಲಿ ಇವು ಸಾವಿಗೆ ಪ್ರಮುಖ ಕಾರಣವಾಗಿವೆ. ಅದರ ಉಲ್ಬಣಕ್ಕೆ ಒಂದು ಮುಖ್ಯ ಕಾರಣವೆಂದರೆ ನಾವು ಸೇವಿಸುವ ಆಹಾರ.
ಆದರೆ, ಆಧುನಿಕತೆಯ ಭರಾಟೆಯಲ್ಲಿನಾವು ನಮ್ಮ ಪುರಾತನ ಆಹಾರ ಪದ್ಧತಿಯನ್ನು ಮರೆತಿದ್ದೇವೆ ಅದನ್ನು ಮತ್ತೆ ನಮ್ಮ ದೇಶದ ಜನತೆಗೆ ಪರಿಚಯಿಸಬೇಕು.
ಎನ್ನುವ ನಿಟ್ಟಿನಲ್ಲಿ ಏಪ್ರಿಲ್ 10ರ ಬೆಳಗ್ಗೆ 11: ಗಂಟೆಗೆ ಗಾಮನಗಟ್ಟಿಯಲ್ಲಿನ ಕೈಗಾರಿಕಾ ಪ್ರದೇಶದ ಮಹಿಳಾ ಉದ್ಯಮಿ ಪಾರ್ಕ್ನಲ್ಲಿ ಸ್ಥಾಪಿಸಿರುವ ಗಾಯತ್ರಿ ಇಂಡಸ್ಟೀಸ್ ಕಾರ್ಖಾನೆಯನ್ನು ಲೋಕಾರ್ಪಣೆ ಮಾಡುತ್ತಿದೆ.
ಈ ಮೂಲಕ ಸಿರಿಧಾನ್ಯಗಳ ಅದ್ಭುತ ಉತ್ಪನ್ನಗಳನ್ನು ಮಾರುಕಟ್ಬೆಗೆ ಬಿಡುಗಡೆ ಮಾಡಲಾಗುತ್ತಿದೆ..
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಉತ್ತರ ಪ್ರಾಂತ್ಯದ ಸಹ ಸಂಚಾಲಕ ರಾದ
ಸನ್ಮಾನ್ಯ ಶ್ರೀ ಅರವಿಂದರಾವ್ ದೇಶಪಾಂಡೆ ಅವರು ಹಾಗೂ ಕೇಂದ್ರ ಸಚಿವರಾದ ಮಾನ್ಯ ಶ್ರೀ ಪ್ರಲ್ಹಾದ ಜೋಶಿ ಅವರು ಕಾರ್ಖಾನೆ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ, ಸಚಿವರಾದ ಶ್ರೀ ಶಂಕರ ಪಾಟೀಲ ಮುನೇನಕೊಪ್ಪ ಶಾಸಕರಾದ ಶ್ರೀ ಅರವಿಂದ ಬೆಲ್ಜದ, ಶ್ರೀ ಪ್ರದೀಪ ಶೆಟ್ಟರ, ಸಂಸ್ಕರಿತ ಆಹಾರಗಳ ಕೇಂದ್ರದ ನಿರ್ದೇಶಕ ಶ್ರೀ ಚೇತನ ಹಂಚಾಟೆ, ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಐದು ಸಿರಿಧಾನ್ಯ ಉತ್ಪನ್ನಗಳ ಬಿಡುಗಡೆ ಇದಾಗಿರಲಿದೆ.
ಗಾಯತ್ರೀ ಇಂಡಸ್ಟ್ರೀಸ್ ಹುಬ್ಬಳ್ಳಿ
ವತಿಯಿಂದ “MAKE IT EASY” ಹೆಸರಿನಡಿ ಒಟ್ಟುಐದು ಪ್ರಮುಖ ಸಿರಿಧಾನ್ಯಗಳ
ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಸಿರಿಧಾನ್ಯಗಳಾದ ನವಣಿ, ಅರ್ಕ, ಸಾಮೆ, ಬರಗು, ಅರ್ಕ, ಊದಲು ಸೇರಿದಂತೆ ಮುಂತಾದ ಆರೋಗ್ಯದಾಯಕ ಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ಉತ್ಪನ್ನಗಳಲ್ಲಿಹೇರಳವಾದ ಪೌಷ್ಠಿಕಾಂಶಗಳಿವೆ. ಪುಟ್ಟಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಅಗತ್ಯವಾದ ಪೌಷ್ಠಿಕಾಂಶಗಳು ಇದರಲ್ಲಿ ದೊರೆಯುತ್ತವೆ. ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಈ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ.