ಬೆಂಗಳೂರು/ಹುಬ್ಬಳ್ಳಿ: ಭಾರತ ಸಿನಿಜಗತ್ತಿಗೆ ಮತ್ತಷ್ಟು ಹೊಸ ಹೊಸ ಅನುಭವಗಳನ್ನು ಹಂಚಲು ವೇದಿಕೆ ಸಿದ್ಧ ಮಾಡಿಕೊಂಡಿರುವ ಕಥೆ,ಚಿತ್ರಕಥೆ ಮನಸೂರೆ ಗೊಳಿಸುವ ಡೈಲಾಗ್ ಬರೆದಿರುವ ರಾಘವೇಂದ್ರ ರೆಡ್ಡಿ ಸಿನಿಮಾಕ್ಕೆ ರಾಜಕೀಯ ಮತ್ತು ಭೂಗತ ಲೋಕದಲ್ಲಿನ ಆಗುಹೋಗುಗಳ ವಿಭಿನ್ನತೆಗಳಿಂದ ಕೂಡಿರುವ ಚಿತ್ರ “ಶಾಸನ ಸಭ”.
ನಿರ್ದೇಶಕ ವೇಣು ಮದಿಕಾಂತಿಯವರ ಅತ್ಯುತ್ತಮ ನಿರ್ದೇಶನ ಹಾಗೂ ನಿರ್ಮಾಪಕರಾದ ಸಪ್ಪಾನಿ ಬ್ರದರ್ಸ್ ಗಳಾದ ತುಳಸಿರಾಮ್ ಸಪ್ಪಾನಿ, ಶಣ್ಮುಘಮ್ ಸಪ್ಪಾನಿ ಮತ್ತು “ಕೆಜಿ ಎಫ್” ನಂತಹ ಬ್ಲಾಕ್ ಬಸ್ಟರ್ ಸಿನೆಮಾಗಳಿಗೆ ವಿಭಿನ್ನ ಶೈಲಿಯಲ್ಲಿ ಸಂಗೀತ ಸಂಯೋಜಿಸಿದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸರೂರ ಅವರ ಸಂಗೀತ ಸಂಯೋಜನೆ ಮತ್ತೋಮ್ಮೆ ಸಿನಿಮಾ ರಸಿಕರನ್ನ ಹುರಿ ದುಂಬಿಸುವ ಎಲ್ಲ ಲಕ್ಷಣ ಗಳು ಚಿತ್ರ “ಶಾಸನ ಸಭ” ದಲ್ಲಿನ ಒಂದು ಝಲಕ್ ಕಂಡು ಬರುತ್ತಿದೆ.ಡಿಸೆಂಬರ್ 16-2022ರಂದು ದೇಶಾದ್ಯಂತ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಇನ್ನೂ ಚಿತ್ರದಲ್ಲಿನ ಪೋಸ್ಟರ್ ಗಳು ರಾಜಕೀಯ ಮತ್ತು ಭೂಗತ ಲೋಕದಲ್ಲಿನ ಆಗು ಹೋಗುಗಳ ಬಗ್ಗೆ ವಿಶೇಷವಾಗಿ ಹೆಣೆದಿರುವ ಕಥೆಗೆ ನಾಯಕ ನಟನಾಗಿ ಅಭಿನಯಿಸಿರುವ ಇಂದ್ರ ಸೇನಾ ಖಡಕ್ ಲೂಕ್ ಎಲ್ಲರನ್ನ ಮತ್ತೊಮ್ಮೆ ಹುಬ್ಬೇರಿಸುವಂತೆ ಮಾಡಿದ್ದಾರೆ.
ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಯಾಗುತ್ತಿರುವ “ಶಾಸನ ಸಭ” ತೆಲಗು,ಕನ್ನಡ,ಹಿಂದಿ,ತಮೀಳ್,ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಧಿಕೃತ ಟ್ರೈಲರ್ ಲಾಂಚ್ ಇಂದು ನವೆಂಬರ 27ರಂದು ಅದ್ದೂರಿಯಾಗಿ ಬಿಡುಗಡೆಗೆ ಚಿತ್ರ ತಂಡ ಸಕಲ ಸಿದ್ಧತೆಗಳೊಂದಿಗೆ ಟ್ರೆಲರ್ ಲಾಂಚ್ ಮಾಡಿದೆ. ಖ್ಯಾತ ಹಿನ್ನೆಲೆ ಗಾಯಕಿ ಮಂಗಲಿ ಹಾಡಿರುವ ಐಟಂ ಸಾಂಗ್ “ನನ್ನೂ ಪಟ್ಟುಕುಂಟೆ” ಈಗಾಗಲೇ ಜಾಲತಾಣಗಳಲ್ಲಿ ಸಂಗೀತ ಪ್ರೀಯರ ಮನಗೆದ್ದಿದ್ದು ಸಕತ್ ಸೌಂಡ್ ಮಾಡುತ್ತಿದೆ.
ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ “ಶಾಸನ ಸಭ” ಚಿತ್ರ ಪ್ಯಾನ್ ಇಂಡಿಯಾದ ಸಿನಿಮಾದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಿದ್ದವಾಗಿದೆ.