ಸ್ಥಳೀಯ ಸುದ್ದಿ
ಸಿಎಂ ಮಾಧ್ಯಮ ಸಂಯೋಜಕರಿಗೆ ಆತ್ಮೀಯ ಸನ್ಮಾನ
ಧಾರವಾಡ
ಸಿಎಂ ಮಾಧ್ಯಮ ಸಂಯೊಜಕ ಶ್ರೀ ಶಂಕರ್ ಪಾಗೋಜಿ ಅವರಿಗೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಹಾಗೂ ಧಾರವಾಡ ಪತ್ರಕರ್ತರಿಂದ ಆತ್ಮೀಯವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.
ಧಾರವಾಡ ಜಿಲ್ಲೆಯ ದೇವಗಿರಿ ಗ್ರಾಮದವರಾದ ಶಂಕರ್ ಪಾಗೋಜಿ ಅವರು ಇದೇ ವಿದ್ಯಾವರ್ಧಕ ಸಂಘದ ಮೂಲಕ ಹಲವಾರು ನಾಟಕಗಳನ್ನು ಮಾಡಿ ಬೆಳೆದವರು.
ತಮ್ಮ ಬಾಲ್ಯದ ದಿನಗಳನ್ನು ಹಿರಿಯ ಪತ್ರಕರ್ತರಾಗಿರುವ ಹಾಗೂ ಶಂಕರ ಪಾಗೋಜಿ ಅವರ ಆಪ್ತ ಸ್ನೇಹಿತರಾದ ಬಸವರಾಜ ಹೊಂಗಲ್ ಅವರು ನೆನೆಪು ಮಾಡಿಕೊಂಡು, ಶಾಲೆಗೆ ಹೋಗಬೇಕಾದ ದಿನಗಳಲ್ಲಿ ನಡೆದುಕೊಂಡು ಹೋದಂತಹ ಉದಾಹರಣೆ ಉಂಟು. ಇಂತಹ ವ್ಯಕ್ತಿ ಸಿಎಂ ಅವರಿಗೆ ಸಂಯೋಜಕರಾಗಿದ್ದು, ನಮ್ಮೇಲರ ಹೆಮ್ಮೆ ಎಂದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಶಂಕರ ಪಾಗೋಜಿ ಅವರು, ತವರು ಮನೆಯ ಸನ್ಮಾನವನ್ನು ಹಿರಿಯರ ನಡುವೆ ಸ್ವೀಕಾರ ಮಾಡಿದ್ದು ನನ್ನ ಪುಣ್ಯ. ಧಾರವಾಡಕ್ಕೆ ಆಗಬೇಕಾಗಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ತೋರಿಸುವೆ ಎಂದರು.