ಸಿಎಂ ಬೊಮ್ಮಾಯಿ ಮಾನಿಟರಿಂಗ್ ಮಾಡ್ತಾ ಇದ್ದಾರೆ ಎಸ್ ಡಿ ಎಂ ಕೊರೊನಾ ಕೇಸ
ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಕೇಸ್ಗಳು ಮತ್ತೆ ಹೆಚ್ಚಾಗುತ್ತಿವೆ. ಕೊರಾನಾ ಕೇಸ್ಗಳ ಹೆಚ್ಚಳ ಹಿನ್ನೆಲೆಯಲ್ಲಿ ಸ್ವಂತ: ಸಿಎಂ ಬೊಮ್ಮಾಯಿ ಅವರು ನೇರವಾಗಿ ಜಿಲ್ಲಾಧಿಕಾರಿ ಜೋತೆಗೆ ಚರ್ಚಿಸಿ
ಕೊರೊನಾ ಕಂಟ್ರೋಲ್ ಮಾಡ್ತಾ ಇದ್ದಾರೆ. ಜಿಲ್ಲೆಯ ಎಸಡಿಎಂ ಮೆಡಿಕಲ್ ಕಾಲೇಜಿ ಇದೀಗ ಕೊರೊನಾ ಹಾಟಸ್ಪಾಟ್ ಆಗಿದೆ.
ಎಸ್ಡಿಎಂ ಓಪಿಡ್ ಬಂದ್ ಮಾಡಿದ ಜಿಲ್ಲಾಡಳಿತ
ಏರ್ಮಜೆನ್ಸಿ ರೋಗಿಗಳಿಗೆ ಬೇರೆ ಪರ್ಯಾಯ ವ್ಯವಸ್ಥೆ
ಧಾರವಾಡ ಜಿಲ್ಲೆಯಲ್ಲಿ ದಿನಕ್ಕೆ 2-3 ಬರುತ್ತಿದ್ದ ಕೊರೊನಾ ಕೇಸ್ಗಳು , ಇದೀಗ 100 ಗಡಿ ದಾಟುತ್ತಿದೆ. ಜಿಲ್ಲೆಯಲ್ಲಿ ಎಸ್ಡಿಎಂ ಮೆಡಿಕಲ್ ಕಾಲೇಜು ಇದಕ್ಕೆ ಕಾರಣವಾಗಿದೆ. ನವೆಂಬರ್ 17 ರಂದು
ಒಂದು ಕಾರ್ಯಕ್ರಮದಲ್ಲಿ ಶುರುವಾದ ಕೊರೊನಾ ಪಾಸಿಟಿವ್ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಾ ಹೋಗುತ್ತಿವೆ. ನವೆಂಬರ್ 25 ರಂದು 66 ಕೇಸಗಳು ಬಂದ್ರೆ, ನವೆಂಬರ್ 26 ರಂದು 116 ಜನರಿಗೆ ಪಾಸಿಟಿವ್
ಬಂದು ಒಟ್ಟು 182 ಮಂದಿಗೆ ಕೊರೊನಾ ಸೊಂಕು ಧೃಡವಾಗಿದೆ. ಸುಮಾರು 3 ಸಾವಿರ ಸಿಬ್ಬಂದಿ ಇರುವ ಈ ಎಸ್ಜನರಲ್ಲಿದೆಲೇಜಿನಲ್ಲಿ 4 ಸಾವಿರ ವಿದ್ಯಾರ್ಥಿಗಳು ಮೆಡಿಕಲ್ ಓದುತ್ತಿದ್ದಾರೆ. ಮೆಡಿಕಲ್ ಕಾಲೇಜಿನಲ್ಲಿ
ಯುಜಿ-ಪಿಜಿ ಇರುವ ವಿದ್ಯಾರ್ಥಿಗಳು, ಒಂದೇ ಹಾಸ್ಟೇಲನಲ್ಲಿ ಊಟ ಮಾಡುತ್ತಿರುವುದು ಈ ಕೊರೊನಾ ಕೇಸ್ಗಳು ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಸ್ವತ: ಸಿಎಂ ಬೊಮ್ಮಾಯಿ ನೇತೃತ್ವ ವಹಿಸಿ ಜಿಲ್ಲಾಧಿಕಾರಿ
ನಿತೇಶ ಪಾಟೀಲ್ ಜೋತೆಗೆ ಸಂಪರ್ಕದಲ್ಲಿದ್ದಾರೆ.
*ಅಂಟೆಡರ್ಗಳಿಗೆ ರೋಗಿಗಳ ಜೋತೆಗೆ ಇರಲು ನಿರ್ಬಂಧ ಹೇರಿದ ಜಿಲ್ಲಾಡಳಿತ
ಜಿನ್ಯೂನ್ ಸಿಕ್ವೆನ್ಸಿಂಗ್ ಕೇಸ್ಗಳು ಬೆಂಗಳೂರಿನ ಲ್ಯಾಬಗೆ ರವಾನೆ
ಇನ್ನು ಎಸ್ಡಿಎಂ ಮೆಡಿಕಲ್ ಕಾಲೇಜಿನಲ್ಲಿ 182 ಜನರ ಪೈಕಿ, 25 ವೈದ್ಯರಿಗೆ- ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ್ರೆ ಉಳಿದಂತೆ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸೊಂಕು
ತಗುಲಿದೆ. ಸುತ್ತಲಿನ 500 ಮೀಟರ್ ಪ್ರದೇಶದಲ್ಲಿ ಬರುವ ಎಲ್ಲಾ ಶಾಲೆ-ಕಾಲೇಜುಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಇನ್ನು ಕಾಲೇಜಿನಲ್ಲಿ 10 ಟೀಮಗಳನ್ನು ಮಾಡಿ ಪ್ರತಿ ದಿನಕ್ಕೆ 1000 ದಿಂದ
2000 ಮಂದಿ ಕೊರೊನಾ ಟೆಸ್ಟಿಂಗ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಜನರು ಸಾಮಾಜಿಕ ಅಂತರ, ಮಾಸ್ಕ ಹಾಕಿಕೊಳ್ಳುವುದು, ವ್ಯಾಕ್ಸಿನ್ ಹಾಕಿಕೊಳ್ಳುವುದು ಮಾಡಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಮನವಿ ಮಾಡಿದ್ದಾರೆ.
ಧಾರವಾಡದ ಎಸ್ಡಿಎಂ ಆಸ್ಪತ್ರಯಲ್ಲಿ ಕೊರೊನಾ ಕಟ್ಟಿ ಹಾಕಲು ಬಬೋಲ್ ಜೋನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಕಠಿಣ ಕ್ರಮಗಳನ್ನು ಮಾಡುವುದರ ಮೂಲಕ ನಿತೇಶ ಪಾಟೀಲ್
ಕೊರೊನಾ ನಿಯಂತ್ರಣಕ್ಕೆ ತರುತ್ತಾರೆ ಎನ್ನುವ ವಿಶ್ವಾಸ ಅಧಿಕಾರಿಗಳಲ್ಲಿ ಹಾಗೂ ಜಿಲ್ಲೆಯ ಜನರಲ್ಲಿದೆ.