ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡಲು ಹೊರಟಿದೆ:ಚೇತನ್ ಅಹಿಂಸಾ
ಮೇಕೆದಾಟು ಅಣೆಕಟ್ಟು ಯೋಜನೆ ತಪ್ಪಾಗಿದೆ : ಚೇತನ್ ಅಹಿಂಸಾ
ಕುಣಿಗಲ್: ಸದಾ ಕಾಂಟ್ರವರ್ಸಿ ಸುದ್ದಿ, ವಿವಾದದಿಂದಲೇ ಸುದ್ದಿಯಾಗುವ ಚಿತ್ರ ನಟ ಚೇತನ್ ಅಹಿಂಸಾ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿದೆ, ಸಾವಿರಾರು ಕೋಟಿ ಖರ್ಚು ಮಾಡಿ ಮೇಕೆದಾಟು ಅಣೆಕಟ್ಟು ಕಟ್ಟಲು ಹೊರಟಿದ್ದಾರೆ, ಇದು ತಪ್ಪು ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹೀಸಾ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿ ಸಂತೆಮಾವತ್ತೂರು ಗೊಲ್ಲರ ಹಟ್ಟಿಯ ಜುಂಜಪ್ಪನ ಕಾವಲಿನಲ್ಲಿ ಕಾಡುಗೊಲ್ಲ ಜುಂಜಪ್ಪನ ಕಾವಲು ಸಂರಕ್ಷಣಾ ಸಮಿತಿ ಮತ್ತು ಅರಣ್ಯ ಇಲಾಖೆ ವತಿಯಿಂದ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಮೇಕೆದಾಟು ಯೋಜನೆಯಿಂದ ಅಲ್ಲಿನ ಸುಂದರ ಪ್ರಕೃತಿ ಮುಳುಗಡೆಯಾಗುತ್ತದೆ ಹಾಗೂ ಜೀವ ವೈವಿಧ್ಯತೆಗೆ ದಕ್ಕೆ ಬರುತ್ತದೆ, ಇದನ್ನು ಸರ್ಕಾರ ಗಮನಿಸಬೇಕು, ಪರಿಸರ ಉಳಿದರೆ ನಾವು ಉಳಿಯುತ್ತೇವೆ ಎಂಬುದ ಅರಿಯಬೇಕು,ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಹಲವಾರು ಜನರ, ವರ್ಗದ, ಬುಡಕಟ್ಟು ಜನಾಂಗದ ಕೊಡುಗೆ ಇದೆ ಎಂದರು.
ಕಾಡುಗೊಲ್ಲ ಜುಂಜಪ್ಪ ಒಬ್ಬ ಪಶುಪಾಲಕನಾಗಿದ್ದು, ಅವರನ ಪರಂಪರ ಕರ್ನಾಟಕದ ಬಯಲು ಸೀಮೆಗಳಾದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬದೆ, ಜುಂಜಪ್ಪನ ಕುರುಹು ಇರುವುದೇ ಇಂತಹ ಕಾವಲುಗಳಲ್ಲಿ, ಆದ್ದರಿಂದ ನಾವು ಅತ್ಯಂತ ಜೋಪಾನವಾಗಿ ಇದನ್ನು ಉಳಿಸಿಕೊಳ್ಳಬೇಕೆಂದರು.
ವೇದ ಚಲನಚಿತ್ರ ಗಾಯಕ ಮೋಹನ್ ಕುಮಾ ಮಾತನಾಡಿ, ನಮ್ಮ ಬುಡಕಟ್ಟು ಪರಂಪರೆಯ ಜನರು ತಮ್ಮ ಮೌಖಿಕ ಪರಂಪರೆಯನ್ನು ಇಂತಹ ಕಾವಲುಗಳಲ್ಲಿಯೇ ಕಟ್ಟಿದ್ದಾರೆ, ಇದನ್ನು ನಾವು ಮುಂದಿನ ತಲೆಮಾರಿಗೆ ಸಾಗಿಸಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಹೇಮಾಬಾಯಿ, ಗ್ರಾಪಂ ಸದಸ್ಯ ಮಂಜುನಾಥ ಶಶಿಕುಮಾರ್, ಚಿಂತಕ ಉಜ್ಜಜ್ಜಿ ರಾಜಣ್ಣ, ಕಾಡುಗೊಲ್ಲ ಜುಂಜಪ್ಪನ ಕಾವಲು ಸಂರಕ್ಷಣಾ ಸಮಿತಿಯ ಮುಖಂಡ ನಾಗಣ್ಣ ಜೆ.ಕೆ, ವಕೀಲ ಸಿಂಗಯ್ಯ, ಉಪನ್ಯಾಸಕ ಶಿವಲಿಂಗಯ್ಯ, ನಾಗಮ್ಮ ಅರಣ್ಯ ಅಧಿಕಾರಿ ತಾರಕೇಶ್ವರಿ, ಪಾರೀಸ್ಟರ್ ಮೋಹನ್, ಸಿಳ್ಳೇಖ್ಯಾತ ಸಮುದಾಯದ ಲಕ್ಷ್ಮೀ ನರಸಿಂಹ, ಸೋಲಗ ಸಮುದಾಯದ ಹೊನ್ನಪ್ಪ, ಇರುಳಿಗ ಸಮುದಾಯದ ರತ್ನಗಿರಿ, ಶೋಷಿತ ಸಮುದಾಯಗಳ ವೇದಿಕೆಯ ಶಿವರಾಜು, ಜಯಣ್ಣ, ಚಿಕ್ಕಣ್ಣ ಹಟ್ಟಿ ಶಿವರಾಜು, ಧನಂಜಯ್ಯ.ವಿ.ಎಸ್. ಇತರರು ಹಾಜರಿದ್ದರು.
ವರದಿ : ಪವನ ನಾ ಕೊಡಹೊನ್ನ