ಶ್ರೀ.ಸಿ.ಬಿ.ಗುತ್ತಲ ಆರ್ಯುವೇದಿಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವಾರ್ಷಿಕೋತ್ಸವ
ಧಾರವಾಡ
ಶ್ರೀ ಸಿ.ಬಿ. ಗುತ್ತಲ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಮುಮ್ಮಿಗಟ್ಟಿ ಧಾರವಾಡದ ವಾರ್ಷಿಕೋತ್ಸವ ವೈಭವ -2022 ಸಮಾರಂಭವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಪೌರರು ಪ್ರಾಚೀನ ಸಂಸ್ಕೃತಿಯಾದ ಈ ಆಯುರ್ವೇದ ಚಿಕಿತ್ಸೆಯನ್ನು, ಗ್ರಾಮೀಣ ನಾಗರಿಕರು ಹಾಗೂ ನಗರದ ನಾಗರಿಕರಿಗೆ ಪರಿಚಯಿಸಿ, ಉತ್ತಮ ಮಟ್ಟದ ಸೇವೆಯನ್ನು ನೀಡಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ. ಕ್ರಾಂತಿಕಿರಣ ರವರು, ವಿಶೇಷ ಕಾರ್ಯದರ್ಶಿಗಳಾದ ಎಸ್.ಬಿ. ಹಿಂಚಗೇರಿ ರವರು, ಕಾರ್ಯದರ್ಶಿಗಳಾದ ರಾಧಾಕೃಷ್ಣ ರವರು, ಅರುಣ ಜೋಷಿ ರವರು, ಬಿ.ಡಿ. ಜತ್ತಿ ಹೊಮಿಯೋಪತಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವೈಷ್ಣವಿ ಸತೀಶ ರವರು, ಸಿ.ಬಿ. ಗುತ್ತಲ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಶಿಧರ ಹೊಂಬಳ ರವರು, ಡಾ.ಸೊಪ್ಪಿನಮಠ ರವರು, ಹಾಗೂ ಮಹಾವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.