ಶ್ರೀ ಗಳ ಮೇಲಿನ ಲೈಂಗಿಕ ಕಿರುಕುಳ ಆರೋಪ ಸತ್ಯಕ್ಕೆ ದೂರವಾದದ್ದು: ಗಂಗಾಧರ ದೊಡ್ಡವಾಡ!
ಚಿತ್ರದುರ್ಗ/
ಹುಬ್ಬಳ್ಳಿ: 12ನೇ ಶತಮಾನದ ನಂತರ ಮಹಾನ್ ಮಾನವಾತಾವಾದಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನಾಡಿನ ಎಲ್ಲ ಶರಣರಂತೆ ಅರಿತು. ಸತ್ಯ ಧರ್ಮಗಳ ಆಧಾರಿತ ಸರ್ವ ಸಮಾಜಗಳನ್ನು ಒಗ್ಗೂಡಿಸಿಕೊಂಡು ಅಖಂಡ ಲಿಂಗಾಯತ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವ ಚಿತ್ರದುರ್ಗದ ಬೃಹನ್ಮಠದ ಪೀಠಾದಿಪತಿಗಳಾದ ಶ್ರೀ ಶ್ರೀ ಮುರುಘರಾಜೇಂದ್ರ ಶಿವಮೂರ್ತಿ ಶರಣರ ಮೇಲೆ ಕೇಳಿಬರುತ್ತಿರುವ ಆರೋಪ ಷಡ್ಯಂತ್ರ ಮತ್ತು ಕಾಣದ ಕೈಗಳ ಹಸ್ತಕ್ಷೇಪದ ಕುತಂತ್ರದಿಂದ ಸ್ವಾಮಿಜಿಯವರ ತೇಜೊವಧೆ ಮಾಡಲಾಗುತ್ತಿದೆ. ಎಂದು ಲಿಂಗಾಯತ ಸಮಾಜದ ಮುಖಂಡ ಗಂಗಾಧರ ದೊಡ್ಡವಾಡ್ ಶ್ರೀ ಗಳ ಮೇಲಿನ ಆರೋಪವನ್ನು ಖಂಡಿಸಿದ್ದಾರೆ.
ಪಟ್ಟಬದ್ಧ ಹಿತಾಸಕ್ತಿಗಳು ವಿಧ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದೆ.
ಶ್ರೀಗಳನ್ನು ಕಳೆದ 30 ವರ್ಷಗಳಿಂದ ನಾವು ಅರಿತಿದ್ದೇವೆ ಅವರೆಂದೂ ನಡೆತೆಗೆಟ್ಟ ವಿಚಾರಗಳತ್ತ ಗಮನಹರಿಸಿದವರಲ್ಲ. ಅವರ ಸುಲಲಿತ ವಿಚಾರಗಳು ಹಾಗೂ ಜನಪ್ರಿಯತೆಯನ್ನು ಮತ್ತು ಮಠದ ಅಭಿವೃದ್ಧಿಯನ್ನು ಸಹಿಸದ ಕೆಲವು ವಿಕೃತ ಹಿತಾಶಕ್ತಿಗಳು ಶ್ರೀಗಳ ಮೇಲೆ ಲೈಂಗಿಕ ಆರೋಪದ ಕಳಂಕವನ್ನು ಹೊರಿಸಿ ಶ್ರೀಗಳ ಭಕ್ತ ಸಮೂಹವನ್ನೆ ದುಃಖಕರ ಸಂಗತಿಗೆ ತಂದಿದ್ದಾರೆ.
ಮಠದ ಘನತೆ ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಎಂದು ಲಿಂಗಾಯತ ಸಮಾಜದ ಮುಖಂಡ ಗಂಗಾಧರ ದೊಡವಾಡ ಅವರು ಪ್ರಕಟನೆ ನಿಡಿದ್ದು. ಮುರುಘಾ ಶರಣರ ಮೇಲೆ ಬಂದಿರುವ ಆರೋಪವು ಸತ್ಯಕ್ಕೆ ದೂರವಾದದ್ದು ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.ಗೃಹ ಇಲಾಖೆ ಇ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯ ಬಯಲು ಮಾಡಬೆಕು ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸರ್ವ ಲಿಂಗಾಯತ ಸಮಾಜದಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.