ಶೀಘ್ರದಲ್ಲಿಯೇ ಪ್ರಮುಖ ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ಅಮೃತ ದೇಸಾಯಿ
ಧಾರವಾಡ
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಧಾರವಾಡ ಶಾಸಕರಾದ ಅಮೃತ ದೇಸಾಯಿಯವರು ಮಂಗಳವಾರ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಶಾಸಕರಾದ ಅಮೃತ ದೇಸಾಯಿಯವರು ಮಾತನಾಡಿ, ಧಾರವಾಡ 71ರ ಕ್ಷೇತ್ರದಲ್ಲಿ ಅತೀ ಹೆಚ್ಚು ಅನುದಾನ ತರುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಜನರ ಸಹಕಾರ ಮತ್ತು ಪಕ್ಷಾತೀತ ಬೆಂಬಲವೇ ಈ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ ಎಂದರು.
ಬರುವ ದಿನಗಳಲ್ಲಿ ಧಾರವಾಡ ಗ್ರಾಮೀಣ ಭಾಗದ ಬಾಕಿ ಉಳಿದಿರುವ ಎಲ್ಲ ಪ್ರಮುಖ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸುವ ಕಾರ್ಯ ನಡೆಯಲಿದೆ. ರಸ್ತೆಗಳ ಗುಣಮಟ್ಟದ ಕಾಮಗಾರಿಯಲ್ಲಿ ಯಾವುದೇ ರಾಜಿಯಿಲ್ಲ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕಂದಾಯ ಇಲಾಖೆ ಸಹಯೋಗದಲ್ಲಿ ಗರಗ ಗ್ರಾಮದ ನಾಡ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಿದರು.
ನಂತರ ಧಾರವಾಡ ತಾಲೂಕಿನ ಮಂಗಸೂಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗರಗ ಗ್ರಾಮದ ಪರಿಮಿತಿಯಲ್ಲಿ ಆರ್,ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ,
ಅಂತಾರಾಷ್ಟ್ರೀಯ ರೋಟರಿ ಫೌಂಡೇಶನ್ ಮತ್ತು ಟಾಟಾ ಮಾರ್ಕೋಪೋಲೋ ಮೋಟರ್ಸ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಗರಗ ಶಾಲೆಯಲ್ಲಿ ನಿರ್ಮಿಸಿದ ಶೌಚಾಲಯ ಕಟ್ಟಡ ಉದ್ಘಾಟನೆ ಮಾಡಲಾಯಿತು.
ಮುಜರಾಯಿ ಇಲಾಖೆಯಿಂದ ಗರಗದ ಕಲ್ಮಠ ಶ್ರೀ ಗುರು ಮಡಿವಾಳೇಶ್ವರ ಮಠದ ಜೀರ್ಣೋದ್ದಾರ ಕಾಮಗಾರಿಗೆ 5 ಲಕ್ಷ ರೂ ಚೆಕ್ ನ್ನು ಶ್ರೀಮಠದ ಟ್ರಸ್ಟ್ ಗೆ ವಿತರಣೆ ಮಾಡಲಾಯಿತು.
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಲಾಯಿತು.
ಕಂದಾಯ ಇಲಾಖೆ ಸಹಯೋಗದಲ್ಲಿ ಗ್ರಾಮದ ನಾಡಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಲಾಯಿತು.
ಧಾರವಾಡ ತಾಲೂಕಿನ ಮಂಗಸೂಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗರಗ ಗ್ರಾಮದ ಪರಿಮಿತಿಯಲ್ಲಿ ಆರ್,ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಅಂತಾರಾಷ್ಟ್ರೀಯ ರೋಟರಿ ಪೌಂಡೇಶನ್ ಮತ್ತು ಟಾಟಾ ಮಾರ್ಕೋಪೋಲೋ ಮೋಟರ್ಸ ಲಿ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಗರಗ ಶಾಲೆಯಲ್ಲಿ ನಿರ್ಮಿಸಿದ ಶೌಚಾಲಯ ಕಟ್ಟಡ ಉದ್ಘಾಟನೆ ಮಾಡಲಾಯಿತು ಮತ್ತು ಮುಜರಾಯಿ ಇಲಾಖೆಯಿಂದ ಗರಗದ ಕಲ್ಮಠ ಶ್ರೀ ಗುರು ಮಡಿವಾಳೇಶ್ವರ ಮಠದ ಜೀರ್ಣೋದ್ದಾರ ಕಾಮಗಾರಿಗೆ 5 ಲಕ್ಷ ರೂ ಚೆಕ್ ಮಠದ ಟ್ರಸ್ಟ್ ಗೆ ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಶ್ರೀ ತವನಪ್ಪ ಅಷ್ಟಗಿ ಸಂತೋಷ ಹಿರೇಮಠ ತಹಸಿಲ್ದಾರರು, ಅಯ್ಯನಗೌಡ್ರ ಗರಗ ಸರ್ಕಲ್, ಗ್ರಾಮ ಲೆಕ್ಕಾಧಿಕಾರಿಗಳು, ಮಹೇಶ ಎಲಿಗಾರ,ವಿಠ್ಠಲ ಪೂಜಾರ,ರಾಜು ಅಂಗಡಿ
ಪಾಟೀಲ,ಶಿವಾನಂದ ತೋಟಗಿ,ರಾಮನಗೌಡ ಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸರ್ವ ಸದಸ್ಯರಿಗೂ ಉಪಸ್ಥಿತರಿದ್ದರು.