ಶಿರಗುಪ್ಪಿ ಗ್ರಾಮದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ
ಧಾರವಾಡ:– ಕೌಶಲ್ಯಅಭಿವೃದ್ಧಿ ಉದ್ದಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಮತ್ತು ಸಿರಿಫೌಂಢೇಶನ ಶಿರಗುಪ್ಪಿ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕ ಶಿರಗುಪ್ಪಿ ಗ್ರಾಮದಲ್ಲಿ ಮುಖ್ಯಮಂತ್ರಿಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಸ್ವೀಗ್ ಮಷೀನ್ ಆಪರೇಟರ್(swing machine operater) ತರಬೇತಿಕೇಂದ್ರವನ್ನು ಆರಂಭಿಸಲಾಯಿತು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಮುಖ್ಯಸ್ಥರಾದ ಡಾ ಚಂದ್ರಪ್ಪ ಇವರ ಉದ್ಘಾಟಿಸಿ ತರಬೇತುದಾರರನ್ನು ಉದ್ದೇಶಿಸಿ ಮಾತನಾಡಿ ಈ ಯೋಜನೆಯು ಮೊಟ್ಟ ಮೊದಲಬಾರಿ ಗ್ರಾಮೀಣಭಾಗದಲ್ಲಿ ಸಿರಿಫೌOಡೇಶನ ಸಂಸ್ಥಯು ಸಿ ಎಮ್ ಕೆ ಕೆ ವಾಯ್ ( C M K K Y) ಅಡಿಯಲ್ಲಿ ಪ್ರಥಮಭಾರಿ ನಿರುದ್ಯೋಗ ಯುವಕ ಹಾಗು ಯುವತಿಯರಿಗೆ ಕೌಶಲ್ಯತರಬೇತಿ ಮತ್ತು ಜೀವನೋಪಾಯಕ್ಕಾಗಿ ತುಂಬಾ ಅನುಕೂಲಕರವಾಗಲಿದೇ ಆದರಿಂದ ಈ ಯೋಜನೆಯನ್ನು ಉಪಯೋಗಮಾಡಿಕೊಳ್ಳಲು ಎಂದರು.
ಸಿರಿಪೌಂಡೇಶನ ಕಾರ್ಯದರ್ಶಿ ಶ್ರೀಮತಿ ಚೈತ್ರಾ ಶಿರೂರ ಹಾಗು ಯಾಹಾ ವ್ಹಾಟರ ಸಿಸ್ಠಮ ಕಂಪನಿ ಡೈರೇಕ್ಟರ್ ಸಿದ್ದರಾಮ ಶಿರಗುಪ್ಪಿ ಮತ್ತು ತರಬೇತುದಾರರಾದ ಶ್ರೀಮತಿ ಗೀತಾ ಧರ್ಮಣವರ ಕುಮಾರಿ ಚೈತ್ರಾ ಗದಿಗೇಪ್ಪನವರ ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.