ಶಾಸಕರ ಪಾದಯಾತ್ರೆ ನಡಿಗೆ 3 ನೇ ದಿನ ಯಶಸ್ವಿ
ಧಾರವಾಡ
ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ಅವರು ಪತ್ನಿ ಹಾಗೂ ಅಭಿಮಾನಿಗಳೊಂದಿಗೆ ಉಳವಿ ಚನ್ನಬಸವೇಶ್ವರ ದೇವಸ್ಥಾನದವರೆಗೂ ಪಾದಯಾತ್ರೆ ಕೈಗೊಂಡಿದ್ದು, 3 ನೇ ದಿನ ಇಂದು ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.
ಈ ಬಾರಿ 6 ನೇ ವರ್ಷದ ಪಾದಯಾತ್ರೆ ಪ್ರತಿವರ್ಷದಂತೆ,
ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀ ಗುರು ಮಡಿವಾಳೇಶ್ವರ ಮಠದಿಂದ ಪ್ರಾರಂಭವಾಗಿ, ಪಾದಯಾತ್ರೆ, ಧಾರವಾಡದ ತಪೋವನ, ನಿಗದಿ, ಹಳಿಯ್ಯಾಳ ಮೂಲಕ ದಾಂಡೇಲಿ ಕರ್ಕಾ ಟ್ಯಾಂಕ್ ಗೆ ಬಂದು ಶುಕ್ರವಾರ ವಾಸ್ತವ್ಯ ಹೂಡಿತು.
ನಂತರ ಶನಿವಾರ ನಸುಕಿನ ಜಾವದಿಂದ ಮತ್ತೇ ಚಾಲನೆಗೊಂಡ ಪಾದಯಾತ್ರೆ, ಉಳವಿ ಚನ್ನಬಸವೇಶ್ವರ ದೇವಸ್ಥಾನದತ್ತ ಮುಂದುವರೆಯಿತು. ಪಾದಯಾತ್ರೆ ಉದ್ದಕ್ಕೂ ಶ್ರೀ ಗುರು ಚನ್ನಬಸವೇಶ್ವರ ಹಾಗೂ ಶ್ರೀಗುರು ಮಡಿವಾಳ್ವೇಶ್ವರರ ಪರವಾದ ಜಯಘೋಷಗಳು ಮೊಳಗಿದವು.
ಶಾಸಕರಾದ ಅಮೃತ ದೇಸಾಯಿ ಹಾಗೂ ಧರ್ಮಪತ್ನಿ ಪ್ರಿಯಾ ಅಮೃತ ದೇಸಾಯಿಯವರು ಸಾವಿರಾರು ಸದ್ಭಕ್ತದೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಧಾರವಾಡ ತಾಲೂಕಿನ ಸಾವಿರಾರು ಮಹಿಳೆಯರು, ಪುರುಷರು, ವೃದ್ಧರು ಹಾಗೂ ಯುವಕ-ಯುವತಿಯರು ಭಾಗವಹಿಸಿರುವುದು ವಿಶೇಷವಾಗಿದೆ.
ಈ ಸಂಧರ್ಭದಲ್ಲಿ ಗುರು ಹಿರಿಯರು, ಮಡಿವಾಳೇಶ್ವರ ಮಠದ ಸದ್ಭಕ್ತ ಮಂಡಳಿಯವರು ಮತ್ತು ಭಕ್ತರು ವಿವಿಧ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.