ಸ್ಥಳೀಯ ಸುದ್ದಿ

ಶಾಸಕರ ಅರ್ಥಪೂರ್ಣ ಬರ್ತಡೆಗೆ ಸಜ್ಜಾಗುತ್ತಿದೆ ಧಾರವಾಡ ಜಿಲ್ಲೆ

ಧಾರವಾಡ

ಧಾರವಾಡದ ಜನಪ್ರಿಯ ಶಾಸಕರಾದ ಅಮೃತ ದೇಸಾಯಿಯವರ 45ನೇ ಜನ್ಮ ದಿನದ ಅಂಗವಾಗಿ ಇದೇ ದಿನಾಂಕ 16 ರಂದು ಅಮೃತ ಆರೋಗ್ಯ ಸೇವೆ ಎಂಬ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಆಯೋಜಿಸಲಾಗಿದೆ.

ಶಾಸಕರು ಹಾಗೂ ಜನಸೇವಕರಾದ ಅಮೃತ ದೇಸಾಯಿಯವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಅಮೃತ ದೇಸಾಯಿ ಅಭಿಮಾನಿ ಬಳಗದವರು ಸುದ್ದಿಗೋಷ್ಠಿ ನಡೆಸಿದ ಮಾಹಿತಿ ನೀಡಿದ್ರು.

ಆರೋಗ್ಯ ಶಿಬಿರದಲ್ಲಿ 60 ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗವಹಿಸಲಿದ್ದಾರೆ.

ಕ್ಷೇತ್ರದ ಎಲ್ಲ ಬಡ ಜನರಿಗೆ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅನುಕೂಲ ಕಲ್ಪಿಸಲು ಈ ಶಿಬಿರ ನಡೆಸಲಾಗುತ್ತಿದೆ.
60ಕ್ಕೂ ಹೆಚ್ಚು ವೈದ್ಯರು ವಿವಿಧ ಕಾಯಿಲೆಗಳಿಗೆ ಉತ್ತಮ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ರು.

Related Articles

Leave a Reply

Your email address will not be published. Required fields are marked *