ಸ್ಥಳೀಯ ಸುದ್ದಿ
ಶಾಲೆಗಳಿಗೆ ರಜೆ ಘೋಷಿಸಲು ಮನವಿ
ಧಾರವಾಡ
ಇಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಧಾರವಾಡ ವತಿಯಿಂದ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಶ್ರೀ ಶಿವಾನಂದ ಭಜಂತ್ರಿ ಇವರಿಗೆ ಹಾಗೂ ಉಪ ನಿರ್ದೇಶಕರಿಗೆ ,ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸಬೇಕೆಂದು ಸಂಘದಿಂದ ಮನವಿಯನ್ನು ಸಲ್ಲಿಸಲಾಯಿತು
.ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಆರ್ ಎಸ್ ಹಿರೇಗೌಡರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಬಿ ಶಿವಶಿಂಪಿ , ಧಾರವಾಡ ತಾಲೂಕ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಎನ್ ವಿ ತೋರಣಗಟ್ಟೆ ಮತ್ತು ಶ್ರೀ ರಾಜು ಬೆಟಿಗೇರಿ ಹಾಗೂ ಎನ್‌ಪಿಎಸ್ ನೌಕರರ ಹೋರಾಟಗಾರರಾದ ಶ್ರೀ ಹನುಮಂತ್ ಡೊಕ್ನವರ್ ಉಪಸ್ಥಿತರಿದ್ದರು.