ಸ್ಥಳೀಯ ಸುದ್ದಿ

ವ್ಯಾಪಾರಸ್ಥರಿಗೆ ಪಂಗನಾಮ ಹಾಕಿದ ಅಧಿಕಾರಿ

ಧಾರವಾಡ

ಎಫ್ ಎಸ್ ಎ ಎ ಐ ಹೆಸರಿನಲ್ಲಿ ನೂರಾರು ವ್ಯಾಪಾರಸ್ಥರಿಗೆ ಪಂಗನಾಮ ಹಾಕಿದ ನಕಲಿ ಅಧಿಕಾರಿ….!
ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು
ಹೌದು ಧಾರವಾಡದ ಸಪ್ತಾಪುರ, ಬಾರಾಕೋಟ್ರಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ನೂರಾರು ವ್ಯಾಪಾರಿಗಳಿಗೆ ಫುಡ್ ಲೈಸನ್ಸ್ ಹೆಸರಿನಲ್ಲಿ ನಕಲಿ ಅಧಿಕಾರಿಯೊಬ್ಬ. ಪಂಗನಾಮ ಹಾಕಿದ ಘಟನೆ ಸೋಮವಾರ ನಡೆದಿದೆ.

ಬೇಕರಿ ಪರಿಶೀಲನೆ ಮಾಡುತ್ತಿರುವ ನಕಲಿ ಅಧಿಕಾರಿ


ಮಂಜುನಾಥ ಚವ್ಹಾಣ ಎಂಬಾತನೇ ನಕಲಿ ಅಧಿಕಾರಿಯಾಗಿದ್ದಾನೆ.
ಅಸಲಿಗೆ ಇತನಿಗೂ ಎಫ್ ಎಸ್ ಎ ಎ ಐ ( ಫುಡ್‌ ಸೇಪಟಿ ಹಾಗೂ ಸ್ಟ್ಯಾಂಡರ್ಡ್ ಅಥೋರಿಟಿ ಆಫ್ ಇಂಡಿಯಾ )
ಕಚೇರಿಗೂ ಸಂಬಂಧವೇ ಇಲ್ಲ.
ಆದರೂ ರಾಜಾರೋಷವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೆಸರು ಹೇಳಿಕೊಂಡು ಪ್ರತಿಯೊಂದು ಅಂಗಡಿಗೂ ತೆರಳಿ ನಿಮ್ಮ ಫುಡ್ ಲೈಸನ್ಸ್ ಎಲ್ಲಿ ತೋರಿಸಿ ಎಂದು ಪಾನಿ ಪುರಿ ಬಂಡಿ, ಎಗ್ ರೈಸ್ ಅಂಗಡಿ, ಹೋಟೆಲ್ ಹಾಗೂ ಕಿರಾಣಿ ಅಂಗಡಿಗಳಿಗೆ ತೆರಳಿ ಅವಾಜ್ ಹಾಕಿ ಕಾಯ್ದೆ, ಕಾನೂನು ಹೆಸರಿನಲ್ಲಿ ದರ್ಪ ಮೆರೆಯುತ್ತಿದ್ದಾನೆ‌
ಅಲ್ಲದೆ, ಪ್ರತಿಯೊಬ್ಬರ ಬಳಿ ಮೂರುವರೆ ಸಾವಿರ ರೂಪಾಯಿ ಪೀಕುತ್ತಿದ್ದಾನೆ‌.
ಈಗಾಗಲೇ ನೂರಾರು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದು, ಅನೇಕರಿಗೆ ಪರವಾನಿಗೆ ಕೊಟ್ಟಿರುವುದಾಗಿ ಪೋಸು ಕೊಡುತ್ತಾನೆ. ಇತ ಕೊಟ್ಟಿರುವ ಪ್ರಮಾಣ ಪತ್ರ ಅಸಲಿನಾ ಅಥವಾ ನಕಲಿನಾ ಎಂಬುದು ಪಡೆದವರಿಗೆ ಕೂಡ ಗೊತ್ತಿಲ್ಲ.


ಇತನ ಬಗ್ಗೆ ಎಫ್ ಎಸ್ ಎಎ ಐ ( ಫುಡ್‌ ಸೇಪಟಿ ಹಾಗೂ ಸ್ಟ್ಯಾಂಡರ್ಡ್ ಅಥೋರಿಟಿ ಆಫ್ ಇಂಡಿಯಾ ) ಹುಬ್ಬಳ್ಳಿಯಲ್ಲಿ ಅಧಿಕೃತ ಕಚೇರಿಯಿದೆ. ಈ ಬಗ್ಗೆ ಅನೇಕರು ಅವರ ಬಳಿ ದೂರಿದ್ದಾರೆ.
ಆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಬದಲಿಗೆ ಹಣ ಕಳೆದುಕೊಂಡವರಿಗೆ ಪೊಲೀಸರ ಬಳಿ ಹೋಗಲು ಪುಗಸಟ್ಟೆ ಸಲಹೆ ನೀಡುತ್ತಿದ್ದಾರೆ.
ಇವರು ತಮ್ಮ ಸರಕಾರಿ ಕಚೇರಿಯ ಹೆಸರು ಹೇಳಿ ಹಣ ಪಡೆದು ದುರುಪಯೋಗ ಮಾಡಿಕೊಂಡರೂ ಈ ಬಗ್ಗೆ ದೂರು ನೀಡದಿರುವುದು ಇಲ್ಲವೇ ಸಾರ್ವಜನಿಕರ ಗಮನಕ್ಕೆ ತರದಿರುವುದು ಬೇಸರದ ಸಂಗತಿಯಾಗಿದೆ ಎಂದು ಧಾರವಾಡದ ಶ್ರೀ ಮೈಲಾರಲಿಂಗೇಶ್ವರ ಟ್ರೇಡರ್ಸ್ ಮಾಲೀಕ ನಾಗರಾಜ‌ ಕಿರಣಗಿ ತೀವ್ರ ಬೇಸರ ವ್ಯಕ್ತಪಡಿಸಿದರು.
ಅಲ್ಲದೆ, ಆಹಾರ ತಯಾರು ಮಾಡಿ ಮಾರಾಟ ಮಾಡುವವರಿಗೆ ಮಾತ್ರ ಫುಡ್ ಲೈಸನ್ಸ್ ಅಗತ್ಯವಿದೆ. ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಸಿದ್ದ ವಸ್ತು ಮಾರಾಟ ಮಾಡುವ ಕಿರಾಣಿ ಅಂಗಡಿಗಳಿಗೆ ಫುಡ್ ಲೈಸನ್ಸ್ ಅಗತ್ಯವಿಲ್ಲದಿದ್ರೂ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿರುವುದು ಬೇಸರದ ಸಂಗತಿಯಾಗಿದೆ. ಈಗಲಾದರೂ ಎಫ್ ಎಸ್ ಎ ಎ ಐ ( ಫುಡ್‌ ಸೇಪಟಿ ಹಾಗೂ ಸ್ಟ್ಯಾಂಡರ್ಡ್ ಅಥೋರಿಟಿ ಆಫ್ ಇಂಡಿಯಾ ) ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಧಾರವಾಡದ ಬಾರಾಕೋಟ್ರಿ ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿಯ ವತಿಯಿಂದ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ನಾಗರಾಜ ಕಿರಣಗಿ ಎಚ್ಚರಿಸಿದರು

Related Articles

Leave a Reply

Your email address will not be published. Required fields are marked *