ವಂಚಕನ ಅರೆಸ್ಟ ಯಾವಾಗ ಪೊಲೀಸರೇ ಎನ್ನುತ್ತಿದ್ದಾರೆ ಮೋಸ ಹೋದವರು
ಧಾರವಾಡ
ಸರ್ಕಾರಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಎಸ್ ಜಿ ಎಸ್ ಎಸ್ ಹೆಚ್ ಆರ್ ಕನ್ಸಟೆನ್ಸಿಯ ರಾಘವೇಂದ್ರ ಕಟ್ಟಿ ವಿರುದ್ದ 420 ಕೇಸ್…..!ದಾಖಲಾಗಿದೆ.
ಮೂವರು ವಿದ್ಯಾರ್ಥಿಗಳಿಂದ ೨೨,೬೫,೦೦೦/ ರೂಪಾಯಿ ಪಡೆದು ವಂಚನೆ ದೂರು ದಾಖಲು
ಧಾರವಾಡ : ಕೇಂದ್ರ ಸರ್ಕಾರದ ಎನ್ ಇ ಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಕಾಯ್ದೆ ಹೆಸರಿನಲ್ಲಿ ನಗರದ ಎಸ್ ಜಿ ಎಸ್ ಎಸ್ ಹೆಚ್ ಆರ್ ಕನ್ಸಟೆನ್ಸಿಯ ರಾಘವೇಂದ್ರ ಕಟ್ಟಿ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಿ ಹುದ್ದೆಗೆ ಸರಿಸಮಾನದ ಹುದ್ದೆ ನೀಡುವುದಾಗಿ ರಾಘವೇಂದ್ರ ಕಟ್ಟಿ ಹಾಗೂ ಆತನ ಎಜೆಂಟ್ ಶರಣಪ್ಪ ತಿಕೋಟಿಕರ್ ವಿರುದ್ದ 420 ವೋಸ,ವಂಚನೆ ಹಾಗೂ 506 ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿದೆ.
ಒಬ್ಬ ವಿದ್ಯಾರ್ಥಿಯಿಂದ 7.10 ಲಕ್ಷ ಹಾಗೂ ಇಬ್ಬರು ವಿದ್ಯಾರ್ಥಿಗಳಿಂದ
ತಲಾ 7.55 ಲಕ್ಷ ಒಟ್ಟು
೨೨,೬೫,೦೦೦/ ರೂಪಾಯಿ ಪಡೆದು ನೌಕರಿ ಕೊಡಿಸದೆ ಹಣವೂ ಮರಳಿಸದೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಾಗರ ಶೀಳಿನ ಬ್ಯಾಂಕ್ ಖಾತೆಯಿಂದ ದಿ : ೩೧/೦೩/೨೦೨೧ ಹಾಗೂ ೧೬/೦೪/೨೦೨೧ ರಂದು ಶರಣಪ್ಪ ತಿಕೋಟಿಕರ ಖಾತೆಗೆ ೪,೭೮,೦೦೦ ರೂಪಾಯಿಗಳನ್ನು ಹಾಕಲಾಗಿದೆ.
ಮಲ್ಲಿಕಾರ್ಜುನ ಕೂಡಗಿ ಬ್ಯಾಂಕ್ ಖಾತೆಯಿಂದ ದಿನಾಂಕ : ೨೭/೦೪/೨೦೨೧ ರಂದು ರಾಘವೇಂದ್ರ ಕಟ್ಟಿ ಖಾತೆಗೆ ೨,೦೫,೦೦೦ ರೂಪಾಯಿಗಳನ್ನು ಹಾಕಲಾಗಿದೆ.
ಶಿವರಾಜ ಅವಟಿ ಬ್ಯಾಂಕ್ ಖಾತೆಯಿಂದ ದಿನಾಂಕ : ೨೭/೦೪/೨೦೨೧ ರಂದು ರಾಘವೇಂದ್ರ ಕಟ್ಟಿ ಖಾತೆಗೆ ೧,೯೫,೦೦೦ ರೂಪಾಯಿಗಳನ್ನು ಹಾಕಲಾಗಿದೆ.
ಇನ್ನುಳಿದ ಹಣವನ್ನು ದಿನಾಂಕ : ೨೮/೦೭/೨೦೨೧ ರಂದು ೧೩,೮೭,೦೦೦ ರೂಪಾಯಿಗಳನ್ನು ರಾಘವೇಂದ್ರ ಕಟ್ಟಿ ಆಪ್ತರಾದ ಶರಣಪ್ಪ ತಿಕೋಟಿಕರ, ಪ್ರೇಮಾ ಪ್ರಭಾಕರ ಪುದುರ, ವೀರೇಶ ಪ್ರಭಾಕರ ಪುದುರ, ಸತೀಶ ಹೊಸಮನಿ, ಉಮೇಶ ಕಳಸದ , ನಾಗರಾಜ ಸಾವನೂರ, ಶಶಿ, ಪ್ರಭಾಕರ ಭಜಂತ್ರಿಯವರ ಸಮಕ್ಷಮದಲ್ಲಿ ಉಮೇಶ ಕಳಸದ ಕಚೇರಿಯಲ್ಲಿ ಬಾಕಿ ಹಣ ನೀಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಧಾರವಾಡದ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಯಾವ ಕ್ರಮ ಜರುಗಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.