ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಲಾರಿ ಮತ್ತು ಕಾರಿನ ನಡುವೆ ಅಪಘಾತ : ಸಾರ್ವಜನಿಕರ ಪರದಾಟ!
ಹುಬ್ಬಳ್ಳಿ
ಹಾಲಿನ ಟ್ಯಾಂಕರ್ ಕಾರಿನ ಹಿಂಬದಿಗೆ ಗುದ್ದಿದ ಪರಿಣಾಮವಾಗಿ ಚಾಲಕರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಘಟನೆ ಕಿಮ್ಸ್ ಮುಖ್ಯದ್ವಾರದ ಬಳಿ ನಡೆದಿದೆ.
ಸಂಚಾರಿ ವಾಹನಗಳ ದಟ್ಟನೆಯಿಂದ ನಿಧಾನವಾಗಿ ಸಾಗುತ್ತಿದ್ದ ವಾಹನಗಳ ನಡುವೆ ಇದ್ದ ಕಾರು ಮತ್ತು ಲಾರಿಯ ಮಧ್ಯೆ ಅಪಘಾತ ಸಂಭವಿಸಿದೆ.ಹಿಂಬದಿಯಿಂದ ಕಾರಿಗೆ ಗುದ್ದಿದ ಹಾಲಿನ ಟ್ಯಾಂಕರ್ ಚಾಲಕನ ಜೊತೆ ವಾಗ್ವಾದಕ್ಕಿಳಿದ ಕಾರುಚಾಲಕ ಅಪಘಾತ ಹಾನಿ ಭರಿಸಿಕೊಡುವಂತೆ ಪಟ್ಟು ಹಿಡಿದಿದ್ದಾನೆ. ಆದರೆ ಅಪಘಾತ ನಡೆದು ಅರ್ಧ ಘಂಟೆಯಾದರು ಘಟನಾ ಸ್ಥಳಕ್ಕೆ ಸಂಚಾರಿ ಪೊಲಿಸರು ಬರದ ಕಾರಣ ಜಖಂ ಗೊಂಡ ಕಾರಿನ ಚಾಲಕ ನಡು ರಸ್ತೆಯಲ್ಲೆ ವಾಹನ ನಿಲ್ಲಿಸಿದ್ದಾನೆ.
ಕಿಮ್ಸ್ ಆಸ್ಪತ್ರೆಗೆ ಸಾಗುವ ವಾಹನಗಳ ಪರದಾಟ ಹೇಳತಿರದಾಗಿದೆ.ಅಷ್ಟೇ ಅಲ್ಲದೆ ಲಾರಿ ಚಾಲಕರನ್ನ ಕಾರಿನ ಮಾಲಿಕ ಥಳಿಸಿರುವ ಘಟನೆಯು ನಡೆದಿದೆ.ನಂತರ ಬಂದ ಸಂಚಾರಿ ಪೊಲಿಸ್ ಠಾಣೆಯ ಸಿಬ್ಬಂದಿ ಕಾರು ಚಾಲಕನಿಗೆ ಸಂಚಾರಕ್ಕೆ ಮುಕ್ತ ಅವಕಾಶಕ್ಕೆ ಸೂಚನೆ ನೀಡಿದರು ಬೆಲೆಕೊಡಲಾರದ ದೃಶ್ಯ ಕಂಡುಬಂದವು.