ಸ್ಥಳೀಯ ಸುದ್ದಿ

ರೈಲು ಪ್ರಯಾಣಿಕರ ಊಟದಲ್ಲಿ ಜಿರಳೆ ಪತ್ತೆ ಆಹಾರ ಪೂರೈಕೆದಾರರಿಗೆ ಭಾರಿ ದಂಡ

ದೆಹಲಿ: ರೈಲು ಪ್ರಯಾಣಿಕರಿಗೆ ಊಟದಲ್ಲಿ ಜಿರಳೆ ಪತ್ತೆಯಾದ ಪರಿಣಾಮ, ಆಹಾರ ಪೂರೈಕೆದಾರರಿಗೆ (ಕೆಟರಿಂಗ್) ಭಾರಿ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕನೊಬ್ಬ ರಾಣಿ ಕಮಲಾಪತಿ (ಹಬೀಬ್‌ಗಂಜ್)-ಹಜರತ್ ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸತ್ತಿದ್ದ ವೇಳೆ ಊಟವನ್ನು ಆರ್ಡರ್ ಮಾಡಿದ್ದ. ಆದರೆ ಊಟ ಬಂದ ತಕ್ಷಣ ತನ್ ಪಾರ್ಸೆಲ್ನ್ನು ತೆರೆದು ನೋಡಿದಾಗ ಜಿರಳೆ ಕಂಡು ಬಂದಿದೆ. ಕೂಡಲೇ ಆತ ಈ ಕುರಿತು ಟ್ವಿಟರ್ನಲ್ಲಿ ಮಾಹಿತಿನ್ನು ಪೋಟೋ ಸಮೇತ ಹಂಚಿಕೊಂಡು ರೈಲುಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾನೆ.

ಪ್ರಯಾಣಿಕರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, IRCTCಯು ಅಹಿತಕರ ಅನುಭವಕ್ಕಾಗಿ ಕ್ಷಮೆಯಾಚಿಸಿದ್ದು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಆಹಾರ ತಯಾರಿಕೆಯ ಸಮಯದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಸೇವಾ ಪೂರೈಕೆದಾರರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದೆ.

ವೆಸ್ಟ್ ಸೆಂಟ್ರಲ್ ರೈಲ್ವೇ ವಕ್ತಾರರು, ಪ್ರಯಾಣಿಕರಿಗೆ ಕೂಡಲೇ ಪರ್ಯಾಯ ಆಹಾರವನ್ನು ತ್ವರಿತವಾಗಿ ನೀಡಲಾಗಿದೆ. ಲೋಪಕ್ಕೆ ಕಾರಣವಾದ ಕೆಟರಿಂಗ್ನವರಿಗೆ 25,000 ರೂ. ದಂಡವನ್ನು ವಿಧಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಹೆಚ್ಚುವರಿಯಾಗಿ, ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಪರವಾನಗಿದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)

Related Articles

Leave a Reply

Your email address will not be published. Required fields are marked *