ಸ್ಥಳೀಯ ಸುದ್ದಿ

ರಾಷ್ಟ್ರಮಟ್ಟದ ಜರ್ಮನ್ ಶೆಫರ್ಡ್ ಸ್ಫರ್ಧೆಯಲ್ಲಿ ವಿಜೇತವಾದ ಧಾರವಾಡ ಶ್ವಾನಗಳು

ಮಹಾರಾಷ್ಟ್ರ

ವಿದ್ಯಾಕಾಶಿ, ಪೇಢಾನಗರಿ, ಐಐಟಿ ನಗರಿ, ಕವಿಗಳ ಸಾಹಿತಿಗಳ ತವರೂರು ಅಂತೆಲ್ಲಾ ಕರೆಯಿಸಿಕೊಳ್ಳುವ ಧಾರವಾಡ ಜಿಲ್ಲೆ ಇನ್ನೊಂದು ರೀತಿಯಲ್ಲಿ ರಾಷ್ಟ್ರಮಟ್ಟದಲ್ಲಿ‌ ಹೆಸರು ಮಾಡುತ್ತಿದೆ.

ಧಾರವಾಡ ಜಿಲ್ಲೆ ಜರ್ಮನ್ ಶೆಫರ್ಡ್ ಶ್ವಾನಗಳಿಗೆ ಗುಣಮಟ್ಟದ ಟ್ರೇನ್ನಿಂಗ್ ಕೊಡುವ ಜಾಗ ಎಂದೆಲ್ಲಾ ಇದೀಗ ಗುರುತಿಸಿಕೊಳ್ಳುತ್ತಿದೆ.

ಇದಕ್ಕೆಲ್ಲಾ ಕಾರಣ ಅಂದ್ರೆ ಅದು ಟೀಂ ಪೌಲ್ ಟ್ರೇನಿಂಗ್ ಸೆಂಟರ್.

ಹೌದು ಟೀಂ ಪೌಲ್ ಟ್ರೇನ್ನಿಂಗ್‌ ಸೆಂಟರನಲ್ಲಿ ತರಬೇತಿ ಪಡೆದ 2 ಜರ್ಮನ್ ಶೆಫರ್ಡ್ ‌ಶ್ವಾನಗಳು ಇದೀಗ ರಾಷ್ಟ್ರೀಯ ಮಟ್ಟದ ಜೆರ್ಮನ ಶೆಫರ್ಡ ಡಾಗ್ ಶೋದಲ್ಲಿ ಸ್ಫರ್ಧೆಯಲ್ಲಿ ಮೊದಲ ಬಹುಮಾನ ಪಡೆದಿವೆ.

ಮಹಾರಾಷ್ಟ್ರದ ನಾಗಪೂರದ ಆರೆಂಜ್ ಸಿಟಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜರ್ಮನ ಶೆಫರ್ಡ್ ಡಾಗ ಶೋದಲ್ಲಿ ಧಾರವಾಡದ ಟೀಂ ಪೌಲ್ ಗರಡಿಯಲ್ಲಿ ತರಬೇತಿ ಪಡೆದ 2 ಶ್ವಾನಗಳು ಪ್ರಶಸ್ತಿ‌ ಪಡೆದಿವೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇರುವ ಹೊರ ರಾಜ್ಯದ ಶ್ವಾನಗಳು ಸೇರಿದಂತೆ,
40 ವಿದೇಶಿ ಶ್ವಾನಗಳ ಸಹಿತ ಒಟ್ಟು 130 ಶ್ವಾನಗಳು ಈ‌ ಸ್ಪರ್ಧೆಯಲ್ಲಿ ‌ಪಾಲ್ಗೊಂಡಿದ್ದವು.

GSD-CI ಹಾಗೂ KCI ಸಹಯೋಗದಲ್ಲಿ ನಡೆದ ಈ ರಾಷ್ಟ್ರಮಟ್ಟದ ಡಾಗ್ ಶೋ ಶ್ರೀ ಆಶೀಶ ಶುಕ್ಲಾ ನೇತೃತ್ವದಲ್ಲಿ ನಡೆಯಿತು.

ಧಾರವಾಡದವರಾದ ಡಾ.ನಾಗರಾಜ ನಾಯ್ಕ ಅವರ Male ಶ್ವಾನಕ್ಕೆ Breed in India- Seiger ಪ್ರಶಸ್ತಿ

ಧಾರವಾಡದವರಾದ ವಿಶಾಲ ಹಾನಗಲ್ ಅವರ female ಶ್ವಾನಕ್ಕೆ Breed in India – Seigerin ಪ್ರಶಸ್ತಿ ಸಿಕ್ಕಿದೆ.

ಬೆಂಗಳೂರಿನ ಮೂಲದ ಶ್ರೀ ರಾಜೀವ ಮಂಜುನಾಥ ಪ್ರಶಸ್ತಿ ‌ಪಡೆದಿರುವ ಧಾರವಾಡದ 2 ಶ್ವಾನಕ್ಕೂ ಸ್ಫರ್ಧೆಯಲ್ಲಿ ವಿಭಿನ್ನವಾಗಿ ಹಾಗೂ ವಿಶೇಷ ರೀತಿಯಲ್ಲಿ present ಮಾಡಿದ್ರು.

ತಮ್ಮ ತರಬೇತಿಗೆ ಒಳಪಟ್ಟು ರಾಷ್ಟ್ರ ಮಟ್ಟದ ಶೋನಲ್ಲಿ ಪ್ರಶಸ್ತಿ ಗೆದ್ದಿರುವ ಶ್ವಾನಗಳಿಗೆ ಅಭಿನಂದನೆಗಳು ಎಂದು ತರಬೇತಿ ಕೊಟ್ಟಿರುವ ಟೋನಿ ಪೌಲ್ ಅವರು ಶುಭಾಶಯ ತಿಳಿಸಿದ್ರು..

Related Articles

Leave a Reply

Your email address will not be published. Required fields are marked *