ಸ್ಥಳೀಯ ಸುದ್ದಿ
ರಾಜ್ಯದ ಪೊಲೀಸ ಅಧಿಕಾರಿಗೆ ಕೇಂದ್ರ ಗೃಹ ಸಚಿವರಿಂದ ಪ್ರಶಸ್ತಿ
ಬೆಂಗಳೂರು
ರಾಜ್ಯದ ಖಡಕ್ ಪೊಲೀಸ್ ಅಧಿಕಾರಿಗೆ ಗೃಹ ಸಚಿವ ಅಮಿತ್ ಶಾ ಅವರಿಂದ ಪ್ರಶಂಸನೀಯ ಪ್ರಶಸ್ತಿ ಸಿಕ್ಕಿದೆ.
2021 ನೇ ಸಾಲಿನಲ್ಲಿ ಅತ್ಯುತ್ತಮ ತನಿಖಾ ಪತ್ತೆದಾರಿ ಕರ್ತವ್ಯ ನಿರ್ವಹಣೆಯಲ್ಲಿ ರಾಜ್ಯದ ಪೊಲೀಸ್ ಅಧಿಕಾರಿ ಶಿವಪ್ಪ ಸತ್ಯಪ್ಪಾ ಕಮತಗಿ ಅವರಿಗೆ ಗೃಹಸಚಿವರಿಂದ ಪ್ರಶಸ್ತಿ ಸಿಕ್ಕಿದೆ.
ಕಮತಗಿ ಅವರು ಮೂಲತಂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದೊಡವಾಡ ಗ್ರಾಮದವರಾಗಿದ್ದು, ಸಧ್ಯ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕಮತಗಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಕಮತಗಿ ಅವರು ಕುಟುಂಬ ವರ್ಗ ಜೋತೆಯಾಗಿ ಸಂಭ್ರಮ ಇಮ್ಮಡಿಯಾಗಿಸಿತು.
ಸಧ್ಯ ಡಿವೈಎಸ್ಪಿ ಹುದ್ದೆಗೆ ಶೀಘ್ರದಲ್ಲೇ ಕಮತಗಿ ಅವರು ಪದನೋತ್ತಿ ಹೊಂದಲಿದ್ದು, ಈ ಪ್ರಶಸ್ತಿ ಅವರ ಇಲಾಖೆ ಸೇವೆಯಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ.