ರಾಜಕೀಯ ಗದ್ದುಗೆಗಾಗಿ ಮೋಹರಂ ಹಬ್ಬದ ಆಚರಣೆ ಮರೆತ ಜನಪ್ರತಿನಿಧಿಗಳು
ಧಾರವಾಡ
ಅಧಿಕಾರದ ಆಸೆ ಎನ್ನುವುದು ಯಾರಿಗೂ ಬಿಟ್ಟಿಲ್ಲಾ. ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಗಾದಿಗಾಗಿ ಕಸರತ್ತು ನಡೆಸಿರುವ ಪಂಚಾಯತ ಪ್ರತಿನಿಧಿಗಳು ಅಧಿಕಾರದ ಆಸೆಗಾಗಿ ಭಾವೈಕ್ಯತೆ ಸಾರುವ ಮೋಹರಂ ಹಬ್ಬದ ಆಚರಣೆಯನ್ನು ಮರೆತಿದ್ದಾರೆ.
ಇಂತಹದೊಂದು ಘಟನೆ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.
ಯಾದವಾಡ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪಾರವ್ವಾ ಹಿರೇಮಠ ಹಾಗೂ ಉಪಾಧ್ಯಕ್ಷೆ ಲಕ್ಷ್ಮಿ ಗಳಗಿ ಮೋಹರಂ ಹಬ್ಬದ ಆಚರಣೆಯಲ್ಲಿ ಗೈರಾಗಿದ್ದಾರೆ.
14 ಸದಸ್ಯ ಬಲದ ಯಾದವಾಡ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ 5 , ಹಾಗೂ ಬಿಜೆಪಿ ಬೆಂಬಲಿತ 8 ಸದಸ್ಯರು ಇದ್ದಾರೆ. ಮೆಜಾರಿಟಿ ಸೀಟು 8 ಆಗಿದೆ. ಅಧ್ಯಕ್ಷ ಉಪಾಧ್ಯಕ್ಷ ಗಾದಿಗಾಗಿ ತೆರೆ ಮರೆ ಕಸರತ್ತು ನಡೆಸಿರುವ ಪ್ರತಿನಿಧಿಗಳು ಅಧಿಕಾರದ ಆಸೆಗಾಗಿ ಪರಿತಪಿಸುತ್ತಿದ್ದಾರೆ.
ಯಾದವಾಡ ಗ್ರಾಮ ಪಂಚಾಯತಿಯಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಅ ವರ್ಗ ಮೀಸಲಾತಿ ಆಗಿದ್ದರೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾಗಿದೆ.
ಚುನಾವಣೆ ಗದ್ದಲದ ಹೊರತಾಗಿಯೂ ಈ ಬಾರಿ ಯಾದವಾಡ ಗ್ರಾಮದಲ್ಲಿ ಮೊಹರಂ ಹಬ್ಬದ ಆಚರಣೆ ಅದ್ದೂರಿಯಾಗಿ ನಡೆಯಿತು.
3 ಮಜಲುಗಳನ್ನು ಮಾಡಿಕೊಂಡು ಗ್ರಾಮದ ಯುವಪೀಳಿಗೆ ಮೋಹರಂ ದೇವರುಗಳು ಮುಂದೆ ಹೆಜ್ಜೆ ಮಜಲು ಹಾಕಿದ್ರು.
ಅಧಿಕಾರದ ಆಸೆಗಾಗಿ ಊರು ಬಿಟ್ಟು ಹೋಗಿರುವ ಇಬ್ಬರಿಗೆ ಊರಿನ ಜನ ಹಿಡಿಶಾಪ ಹಾಕುತ್ತಿದ್ದರೆ, ಇವರನ್ನು ಹೊರತುಪಡಿಸಿದ್ರೆ ಉಳಿದೆಲ್ಲಾ ಸದಸ್ಯರು ಮೋಹರಂ ಆಚರಣೆಯಲ್ಲಿ ಭಾಗಿಯಾಗಿದ್ದರು.
ಭಾವೈಕ್ಯತೆಗೆ ಯಾದವಾಡ ಗ್ರಾಮ ಯಾವತ್ತಿದ್ದರೂ ಒಂದೆ. ನಾವು ಆಯ್ಕೆ ಮಾಡಿದ ಚುನಾವಣೆ ಜನಪ್ರತಿನಿಧಿಗಳು ಊರಿನಲ್ಲಿ ಇದ್ದರೂ ಅಷ್ಟೇ. ಇಲ್ಲದಿದ್ದರೂ ಅಷ್ಟೇ ಎಂದು ಗ್ರಾಮಸ್ಥರು ಸಾರಿ ಹೇಳಿದಂತೆ ಆಗಿದೆ.