ರಸ್ತೆ ಮಧ್ಯೆ ಕೇಂದ್ರ ಸಚಿವರ ವಾಹನ ನಿಲ್ಲಿಸಿದ ರೈತರು.
ಧಾರವಾಡ
ಉಪ್ಪಿನ ಬೆಟಗೇರಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ರಸ್ತೆ ಮಧ್ಯೆ ತಡೆದ ರೈತರು ಬೆಳೆ ಪರಿಹಾರ ತಮಗೆ ಬಂದಿಲ್ಲಎಂದು ತಮ್ಮ ಅಳಲು ತೋಡಿಕೊಂಡರು..
ಮೂರು ವರ್ಷದಿಂದನಮಗೆ ಬೆಳೆ ಪರಿಹಾರವೆ ಬಂದಿಲ್ಲ.. ಬೇಕಿದ್ದರೆ ನಮ್ಮ ಬೆಳೆ ಹಾನಿಯನ್ನು ನೀವೇ ವೀಕ್ಷಿಸಿ.. ಇಷ್ಟಾದರೂ ಅಧಿಕಾರಿಗಳು ಇಲ್ಲಿ ಯಾರೂ ಬರುತ್ತಿಲ್ಲ ನೀವೆ ಪರಿಹಾರ ನೀಡಿ ಎಂದು ಮನವಿ ಮಾಡಿದರು..
ಇದಕ್ಕೆಉತ್ತರಿಸಿದ ಸಚಿವರು ಹಾನಿ ಆಗಿದೆ.. ನಾವು ಮಧ್ಯಂತರದಲ್ಲಿ ಪರಿಹಾರ ನೀಡುತ್ತಿದ್ದೆವೆ.. ಈ ಬಗ್ಗೆ ಪರಿಶೀಲಿಸಲಾಗುವುದು.. ನೀವು ನಿಮ್ಮ ದಾಖಲಾತಿ ನೀಡಿ ಎಂದರು..
ಸರ್‌ನಾವು ಅರ್ಜಿ ಕೊಟ್ಟಿದ್ದೇವೆ.ಆದರೂ ಪ್ರಯೋಜನ ಆಗಿಲ್ಲ ಎಂದು ರೈತ ಧರ್ಮೂ ಸಚಿವರಿಗೆ ತಿಳಿಸಿದರು. ಸುಮಾರು ಒಂದು ನಿಮಿಷ ಅಲ್ಲಿನಿಂತುಕೊಂಡ ಸಚಿವರು ಅಲ್ಲಿಂದ ತೆರಳಿದರು..
ಮುಂಗಾರಿನಲ್ಲಿ ಪರಿಹಾರನೀಡಿದವರಿಗೆ ಹಿಂಗಾರು ಪರಿಹಾರ ಸಿಕ್ಕಿಲ್ಲ. ಹೀಗಾಗಿ ನಮಗೆ ನಷ್ಟ ಆದರೂ ಏಕೆ ಪರಿಹಾರ ಇಲ್ಲ ಎಂಬುದು ರೈತರ ಪ್ರಶ್ನೆ ಆಗಿದೆ.. ಕೆಲವರಿಗೆ ಮುಂಗಾರು, ಹಿಂಗಾರಿನ ಪರಿಹಾರವೂ ಬಂದಿಲ್ಲ ಎಂಬುದನ್ನು ಗಮನಿಸಬೇಕಿದೆ.