ರಸ್ತೆಗಾಗಿ ಕೈ ಪಕ್ಷದಿಂದ ಪ್ರತಿಭಟನೆ
ಧಾರವಾಡ
ಓಲ್ಡ್ ಎಸ್ ಪಿ ಕಛೇರಿಯಿಂದ ಮುರುಘಾಮಠದವರೆಗೆ ಟೆಂಡರ್ ಶೋರ್ ಎಂಬ ಅಡಿಯಲ್ಲಿ ಮಾಡಿದ ಕಳಪೆ ಕಾಮಗಾರಿಯನ್ನು ಕೂಡಲೇ ಸರಿಪಡಿಸಿ ಎಂದು ಕಾಂಗ್ರೆಸ್ ನಾಯಕರು ರಸ್ತೆಗಿಳಿದು ಹೋರಾಟ ಮಾಡಿದ್ರು.
ಪ್ರತಿಭಟನೆಯಲ್ಲಿ ಕೈ ನಾಯಕರು 40% ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ ಎಂದು, ಸಂಬಂಧಪಟ್ಟ ಶಾಸಕರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ, ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದ ಬಳಿಕ ಹೋರಾಟವನ್ನು ಹಿಂದಕ್ಕೆ ತೆಗೆದುಕೊಳ್ಳುಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರ ಆಪ್ತ ಸಹಾಯಕ ಪ್ರಶಾಂತ ಕೇಕರೆ, ಕಾಂಗ್ರೆಸ್ ಮುಖಂಡರಾದ ಅರವಿಂದ್ ಏಗನಗೌಡ್ರ, ಬಸವರಾಜ ಜಾಧವ, ಸಂತೋಷ ನೀರಲಕಟ್ಟಿ , ಪಾಲಿಕೆ ಸದಸ್ಯ ರಾಜು ಕಮತಿ, ಗೌರಮ್ಮ ಬೊಲೋಜಿ, ನವಿನ ಕದಂ, ಮೈನುದ್ದಿನ ನದಾಫ, ನಿಜಾಮ್ ರಾಹಿ, ಶಿವು ಚನ್ನಗೌಡ್ರ,
ಸುರಜ ಪುಡಕಲಕಟ್ಟಿ , ಸುರವ್ವಾ, ಮಂಜುನಾಥ ನಡಟ್ಟಿ, ಹಾಗೂ ಹಂಪಣ್ಣವರ,
ಆನಂದ ಸಿಂಗನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.