ಯಾದವಾಡ ಗ್ರಾಮದ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ
ಧಾರವಾಡ
ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧಾರವಾಡ ತಾಲೂಕು ಹಾಗೂ ಗ್ರಾಮ ಪಂಚಾಯತ್ ಯಾದವಾಡ ಮತ್ತು ಕೆರೆ ಅಭಿವೃದ್ಧಿ ಸಮಿತಿ ಯಾದವಾಡ ಇವರ ಸಹಭಾಗಿತ್ವದಲ್ಲಿ 540ನೇ ನಮ್ಮೂರು ನಮ್ಮ ಕೆರೆ ಹೂಳೆತ್ತುವ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಡಾ. ಆನಂದ ಮಹಾಸ್ವಾಮಿಗಳು ಸಿದ್ಧಾರೂಢ ಮಠ ಯಾದವಾಡ ವಹಿಸಿಕೊಂಡಿದ್ದರು.
ಕಾರ್ಯಕ್ರಮ ವನ್ನು ಧಾರವಾಡ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯಕ್ ಉದ್ಘಾಟಿಸಿ, ಪರಿಸರ ಸಂರಕ್ಷಣೆ ,ಸ್ವಚ್ಛತೆ ,ನೀರಿನ ಮಿತವ್ಯ ಬಳಕೆ ಹಾಗೂ ಗ್ರಾಮದ ಕೆರೆಯ ನಿರ್ವಹಣೆ ಬಗ್ಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ ಗದಿಗಯ್ಯ ಹಿರೇಮಠ ರವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಿರೀಶ್ ಕೋರಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಧಾರವಾಡ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಗಳಗಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವಾನಂದ ಬೆಂಡಿಗೇರಿ ,ಮಡಿವಾಳಪ್ಪ ದಿಂಡಲ ಕೊಪ್ಪ, ಮಂಜುನಾಥ್ ಬಂಡಪ್ನವರ್, ಶಿವಪ್ಪ ಕುಂಬಾರ್, ಲಕ್ಷ್ಮಿ ಹುಲಮನಿ, ಮಕ್ತುಂಬಿ ಹಾವಗಾರ,
ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಹಾಂತೇಶ್ ಗಳ್ಗಿ ,ಉಪಾಧ್ಯಕ್ಷರಾದ ಮಾಬುಸುಬಾನಿ ಬೆಟಗೇರಿ, ಕೋಶಾಧಿಕಾರಿ ಆನಂದ್ ಪ್ರಭು ಕೇಶುಗೊಂಡ, ಉಪ ಕಾರ್ಯದರ್ಶಿ ಗಳಾದ ಶೇಖಣ್ಣ ಕುಂಬಾರ್, ಸದಸ್ಯರುಗಳಾದ ಹನುಮಂತಪ್ಪ ದೊಡ್ಡಮನಿ, ಸುನಿಲ್ ತಪ್ಸಿ, ಲಕ್ಷ್ಮಿ ಎಲೆಗಾರ ,ಸುಮಂಗಲ ಯಳಲಿ, ಅಡಿವಯ್ಯ ಮಠಪತಿ, ಕರಿಯಪ್ಪ ಹುಲಿಮನಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿ, ಧಾರವಾಡ ಪ್ರಾದೇಶಿಕ ವಿಭಾಗದ ಕೆರೆ ಅಭಿಯಂತರದ ನಿಂಗರಾಜ್ , ಸೇವಾ ಪ್ರತಿನಿಧಿ ವಿವೇಕ್ ,vle ಜ್ಯೋತಿ ಉಪಸ್ಥಿತರಿದ್ದರು.
ತಾಲೂಕಿನ ಕೃಷಿ ಮೇಲ್ವಿಚಾರಕರಾದ ಶಂಕ್ರಯ್ಯ ಹಿರೇಮಠ ರವರು ನಿರೂಪಿಸಿದರು.
ತಾಲೂಕಿನ ಯೋಜನಾಧಿಕಾರಿಗಳಾದ ಅಶೋಕ ರವರು ಸ್ವಾಗತಿಸಿದರು .ವಲಯದ ಮೇಲ್ವಿಚಾರಕರಾದ ಚನ್ನಬಸಪ್ಪ ರವರು ವಂದಿಸಿದರು .
ಗ್ರಾಮದ ನಾಗರಿಕರು ಹಾಗೂ ಹಿರಿಯರು ಮತ್ತು ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.