ಮೊಬೈಲ್-ಬೈಕ್ ಕದ್ದು ಜಾಲಿ ರೈಡ್ ಮಾಡುತ್ತಿದ್ದ ಶೋಕಿಲಾಲ್ ಕಳ್ಳನ ಬಂಧನ : 3,17000 ಮೌಲ್ಯದ ವಸ್ತುಗಳು ಪೊಲಿಸರ ವಶಕ್ಕೆ!
ಧಾರವಾಡ
ಹಲವು ತಿಂಗಳುಗಳಿಂದ ಜಿಲ್ಲೆಯ ವಿವಿಧ ಕಡೆ ಕಳ್ಳತನ ಮಾಡುತ್ತ ಸುಖ ಜೀವನ ನಡೆಸುತ್ತಿದ್ದ ಧಾರವಾಡದ ಬೋಗುರು ಗ್ರಾಮದ ಧರ್ಮರಾಜ ಹರಿಜನ (23) ಎಂಬಾತ ಅಪರಿಚಿತರ ಮೊಬೈಲ್ ಗಳನ್ನು ಮಾತನಾಡುವ ನೆಪ ಮಾಡಿ ಮೊಬೈಲ್ ಪಡೆದು ಮೊಬೈಲ್ ಕೊಟ್ಟವರು ಸ್ವಲ್ಪ ಮೈಮರೆತರು ಈತ ಮೋಬೈಲ್ ಸಮೇತ ಪರಾರಿಯಾಗುತ್ತಿದ್ದ. ಅಷ್ಟೇ ಅಲ್ಲದೆ ನಕಲಿ ಬೈಕ್ ಕಿ ಗಳನ್ನು ಬಳಸಿ ಬೈಕ್ ಗಳನ್ನು ಎಗರಿಸುತ್ತಿದ್ದ. ಈತನ ಸಂಶಯಾಸ್ಪದ ನಡೆಯನ್ನು ಗಮನಿಸಿದ ವಿದ್ಯಾಗಿರಿ ಪೊಲಿಸ್ ಠಾಣೆಯ ಪೊಲಿಸರು.
ಠಾಣೆಗೆ ಕರೆತಂದ ವಿಚಾರಣೆ ನಡೆಸಿದಾಗ ಬಾಯಿ ಬಿಟ್ಟ ಧರ್ಮರಾಜ್ ಹರಿಜನ ಬಳಿಯ, ಒಂದು ರಾಯಲ್ ಎನ್ಫೀಲ್ಡ್ ಕ್ಲಾಸಿಕ್,ಸ್ಪ್ಲೇಂಡರ್ ಪ್ಲಸ್ ಮತ್ತು ವಿವಿಧ ಕಂಪನಿಯ 8ಕ್ಕೂ ಹೆಚ್ಚಿನ ಮೋಬೈಲ್ ಗಳು ಸೆರಿದಂತರ ಒಟ್ಟು 3,17000/ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿ ಧರ್ಮರಾಜ್ ಹರಿಜನ ನನ್ನು ಜೈಲಿಗಟ್ಟಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿದ್ಯಾಗಿರಿ ಪೊಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಎಮ್ ಬಾಳನಗೌಡ, ಆರೋಪಿಯ ಕುರಿತು ವಿಶೇಷ ತಂಡ ರಚಿಸಿ ಪಿ ಎಸ್ ಐ ಗಳಾದ ಸಚಿನ್ ದಾಸರಡ್ಡಿ,(ಕಾವಸು)ಎಸ್ ಆರ್ ತೆಗೂರ್ (ಅವಿ) ದೇವೇಂದ್ರ ಮಾನವಿನಂಡಿ(ಪ್ರೋ) ಹೆಚ್ ಕೆ ಘಂಡುನಾಯ್ಕರ, ಟಿಜಿ ಬಂಡಿವಡ್ಡರ,ಎಂ ವಾಯ್ ಮಾದರ, ಆರ್ ಆರ್ ಕೆಂಚನ್ನವರ ಮತ್ತು ಬಿ ಎಮ್ ಪಠಾಣ್ ಕಾರ್ಯಾಚರಣೆ
ನೆರೆ ರಾಜ್ಯದ ಗೋವಾದಲ್ಲಿಯೂ ಈತನ ಮೇಲೆ ಕಳ್ಳತನ ಪ್ರಕರಣ ಗಳಿವೆ ಎಂಬ ಮಾಹಿತಿಯನ್ನ ಪೊಲಿಸರ ತನಿಖೆಯಲ್ಲಿ ಆರೋಪಿ ಒಪ್ಪಿಕೊಂಡಿದ್ದಾನೆ.
ಇನ್ನೂ ವಿದ್ಯಾಗಿರಿ ಪೊಲಿಸರ ಕಾರ್ಯಚರಣೆಗೆ ಆಯುಕ್ತರಾದ ಲಾಭುರಾಮ್ ಅವರು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.