ಧಾರವಾಡ

ಮೈಸೂರು ಸುತ್ತೂರುಮಠದ ಜಗದ್ಗುರು ಶ್ರೀ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯಿಂದ ಶ್ರವಣೋಪಕರಣ ಶಿಬಿರ ಉದ್ಘಾಟನೆ

ಧಾರವಾಡ

ದಿನಾಂಕ : 09 , 10 , 11 ಮತ್ತು 12 ನವಂಬರ್ 2021 ರಂದು ಜೆಎಸ್‌ಎಸ್ ವಾಕ್ ಮತ್ತು ಶ್ರವಣಂಸ್ಥೆ , ಕೆಲಗೇರಿ , ಧಾರವಾಡ ಸಹಯೋಜಕರು ಹಾಗೂ ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಅಲಿ ಯಾವರ್‌ಜಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ ಡಿಸೆಬಿಲಿಟೇಸ್ , ಮುಂಬೈ ಜೆಎಸ್‌ಎಸ್ ವಾಕ್ ಶ್ರವಣ ಸಂಸ್ಥೆ , ಧಾರವಾಡವು , ಅಲಿ ಯಾವರ್‌ಜಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಡಿಸೆಬಿಲಿಟೇಸ್ , ಮುಂಬೈ ಇವರ ಸಹಯೋಗದಲ್ಲಿ ನಾಲ್ಕು ದಿನಗಳ ಉಚಿತ ಶ್ರವಣ ತಪಾಸಣಾ ಹಾಗೂ ಶ್ರವಣ ಯಂತ್ರಗಳ ವಿತರಣಾ ಶಿಬಿರವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಯವರ ಆಶೀರ್ವಾದದೊಂದಿಗೆ , ಜೆಎಸ್‌ಎಸ್ ವಾಕ್ ಶ್ರವಣ ಸಂಸ್ಥೆ , ಧಾರವಾಡದ ಆವರಣದಲ್ಲಿ ಉದ್ಘಾಟನೆಗೊಂಡಿತು . ಡಾ . ರಾಜನ್ ದೇಶಪಾಂಡೆ , ನಿರ್ದೇಶಕರು , ವಿಠಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ಸ್ಪೆಶಾಲಿಟಿ , ಎಂ.ಪಿ.ಬಗಲಿ , ಆಡಳಿತ ಅಧಿಕಾರಿಗಳು ಜೆಎಸ್‌ಎಸ್ ಮಹಾವಿದ್ಯಾಪೀಠ ಧಾರವಾಡ , ಡಾ . ಆರ್.ಪಿ.ಶರ್ಮಾ ಮುಖ್ಯಸ್ಥರು ಔಟೀಚ್ ಮತ್ತು ವಿಸ್ತರಣಾ ಸೇವಾ ಇಲಾಖೆ , ಅಲಿ ಯಾವರ್‌ಜಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ ಡಿಸೆಬಿಲಿಟೇಸ್ , ಮುಂಬೈ ಮತ್ತು ಡಾ . ಜಿಜೋ ಪಿ.ಎಂ. ಪ್ರಾಂಶುಪಾಲರು ಜೆಎಸ್‌ಎಸ್‌ ವಾಕ್ ಶ್ರವಣ ಸಂಸ್ಥೆ , ಧಾರವಾಡ , ಇವರು ಶಿಬಿರದ ಕಾರ್ಯಕ್ರಮನ್ನು ಉದ್ಘಾಟಿಸಿದರು .

ಶ್ರವಣ ದೋಷವುಳ್ಳ , ಪಡಿತರ ಚೀಟಿ ( ಬಿಪಿಎಲ್ ಕಾರ್ಡ ) ಇರುವ ಅಥವಾ ಕಡಿಮೆ ಆದಾಯವುಳ್ಳ , ಒಟ್ಟು 2 ) ರೋಗಿಗಳಿಗೆ ಡಿಜಿಟಲ್ ಶ್ರವಣ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಗುವುದು , ಜೆಎಸ್‌ಎಸ್‌ ವಾಕ್ ಶ್ರವಣ ಸಂಸ್ಥೆಯು ಆಗಾಗ್ಗೆ ಇಂತಹ ಉಚಿತ ಶ್ರವಣ ಯಂತ್ರ ವಿತರಣಾ ಶಿಬಿರಗಳನ್ನು ಆಯೋಜಿಸುತ್ತದೆ . ಇದರಿಂದ ಶ್ರವಣ ದೋಷವುಳ್ಳ , ಹಾಗೂ ಕಡಿಮೆ ಆದಾಯವುಳ್ಳ , ಜನರಿಗೆ ಉಪಯೋವಾಗುವುದು . ಭವಿಷ್ಯದಲ್ಲಿ , ಶ್ರವಣ ದೋಷವುಳ್ಳ ಜನರು ಇಂತಹ ಸೇವೆಗಳನ್ನು ಪಡೆಯಲು ಸಂಸ್ಥೆಗೆ ಭೇಟಿ ನೀಡಬಹುದು . ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಯವರು ಸ್ವತಃ ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು .

Related Articles

Leave a Reply

Your email address will not be published. Required fields are marked *