ಸ್ಥಳೀಯ ಸುದ್ದಿ

ಮೇಯರ್ ಸಂಕಲ್ಪ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಇಚ್ಚಾಶಕ್ತಿಯಿಂದ ನವೀಕರಣಗೊಳ್ಳಲಿದೆ ಕಮಲಾಪೂರದ ಸರ್ಕಾರಿ ಶಾಲೆ

ಧಾರವಾಡ

ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಬಿ.ಡಿ. ಜತ್ತಿ ರವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿದ್ದ ಐತಿಹಾಸಿಕ ಧಾರವಾಡ ಕಮಲಾಪುರದ ಸರಕಾರಿ ಮಾದರಿ ಶಾಲೆ ಇನ್ನುಮುಂದೆ ಹೈಟೆಕ್ ಆಗಲಿದೆ.

ಇದಕ್ಕಾಗಿ‌ ಮೇಯರ್ ಅಂಚಟಗೇರಿ ವಿಶೇಷ ಆಸಕ್ತಿ ವಹಿಸಿದ್ದಾರೆ.

ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಷಿ ರವರ ಕೋರಿಕೆಯ ಮೇರೆಗೆ ಕೋಲ್ ಇಂಡಿಯಾ ಲಿಮಿಟೆಡ್ ಅನುದಾನದಡಿಯಲ್ಲಿ ಈಗಿರುವ ಹಳೆಯ ಶಾಲೆಯನ್ನು ತೆರವುಗೊಳಿಸಿ, ನೂತನ ಮಾದರಿಯ ಶಾಲೆಯನ್ನು ನಿರ್ಮಿಸುವ ಹಿನ್ನೆಲೆಯಲ್ಲಿ, ಇಂದು ಕಟ್ಟಡವನ್ನು ತೆರವುಗೊಳಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ರಾಜಶೇಖರ ಕಮತಿ , ಗಿರಿಮಲ್ಲಪ್ಪ ಸಪ್ಪೂರ, ಮಡಿವಾಳಪ್ಪ ಇಸರಣ್ಣವರ, ಬಸವಣ್ಣೆಪ್ಪ ಅಣ್ಣಿಗೇರಿ , ವಿಠ್ಠಲ ಗೋಡಸೆ, ಫಕೀರಪ್ಪ ಪರಮಣ್ಣವರ, ಸೋಮನಗೌಡ ಪಾಟೀಲ, ಸುರೇಶ ಹುಬ್ಬಳ್ಳಿ, ರಾಜಶೇಖರ ಮಟ್ಟಿ , ಬಸವಣ್ಣೆಪ್ಪ ಬಾಳಗಿ, ಈರಯ್ಯ ರಾಚಯ್ಯನವರ, ಮಲ್ಲೇಶಿ ಶಿಂಧೆ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *