ಸ್ಥಳೀಯ ಸುದ್ದಿ
ಮುರಘಾಮಠದ ಶ್ರೀಗಳಿಗೆ ಬಿಜೆಪಿ ಯುವ ಘಟಕದಿಂದ ಸನ್ಮಾನ
ಧಾರವಾಡ
ಬಿಜೆಪಿ ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಜಿಲ್ಲೆ ವತಿಯಿಂದ…..ಧಾರವಾಡದ ಸುಪ್ರಸಿದ್ಧ ಮುರುಘಾಮಠದ ಪೀಠಧ್ಯಕ್ಷರಾದ ಮ ನಿ ಪ್ರ ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನಸ್ವಾಮಿ ಗುರುಗಳಿಗೆ ಕವಿವಿಯಿಂದ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದ ಹಿನ್ನೆಲೆಯಲ್ಲಿ, ಧಾರವಾಡದ ಮುರುಘಾಮಠಕ್ಕೆ ಭೇಟಿ ನೀಡಿ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಲಾಯಿತು….
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜ ಕುಂದಗೂಳಮಠ ಹಾಗೂ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಶಂಕರ ಕೋಮಾರದೇಸಾಯಿ ಮಂಡಲ ಅಧ್ಯಕ್ಷರುಗಳಾದ ಶ್ರೀ ರುದ್ರಪ್ಪ ಅರಿವಾಳ, ಶ್ರೀ ಕಲ್ಮೇಶ ಬೇಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಾನಂದ ಗುಂಡಗೋವಿ, ಜಿಲ್ಲಾ ಹಾಗೂ ಮಂಡಲ ಯುವ ಮೋರ್ಚಾ ಪದಾಧಿಕಾರಿಗಳ ಉಪಸ್ಥಿತರಿದ್ದರು.