ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ರೈತರ ಕಷ್ಟ ಆಲಿಸಿದ ಶಾಸಕ ಅಮೃತ ದೇಸಾಯಿ
ಧಾರವಾಡ
ಅಕಾಲಿಕ ಮಳೆಗೆ ರೈತರು ಸಾಕಷ್ಟು ಬೆಳೆ ನಷ್ಟ ಅನುಭವಿಸಿದ್ದಾರೆ. ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ, ಜೋಳ, ಗೋಧಿ ಬೆಳೆ ನಷ್ಟವಾಗಿದ್ದು, ಹೂವು ಬೆಳೆಗಾರರು ಕೂಡ ನಷ್ಟ ಅನುಭವಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಶಾಸಕ ಅಮೃತ ದೇಸಾಯಿ ಅವರು, ತಮ್ಮ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳ ರೈತರ ಜಮೀನುಗಳಿಗೆ ತೆರಳಿ ಬೆಳೆ ಹಾನಿ ವೀಕ್ಷಿಸುತ್ತಿದ್ದಾರೆ. ಅಲ್ಲದೇ ಬೆಳೆ ಹಾನಿಗೆ ಸರ್ಕಾರದಿಂದ ಶೀಘ್ರ ಪರಿಹಾರ ಕೊಡಿಸುವುದಾಗಿಯೂ ರೈತರಿಗೆ ಅಭಯ ನೀಡುವ ಕೆಲಸ ಮಾಡುತ್ತಿದ್ದಾರೆ.
ಶನಿವಾರ ಧಾರವಾಡ ತಾಲೂಕಿನ ತಡಕೋಡ ಗ್ರಾಮದ ರೈತರ ಜಮೀನುಗಳಿಗೆ ತೆರಳಿ ಅಲ್ಲಿ ಮಳೆಯಿಂದ ಹಾನಿಗೀಡಾದ.ಬೆಳೆಗಳನ್ನು ವೀಕ್ಷಿಸಿದರು. ನಂತರ ಅಲ್ಲಿಂದ ಕುರುಬಗಟ್ಟಿ ಗ್ರಾಮಕ್ಕೆ ತೆರಳಿ ಹೂವು ಬೆಳೆಗಾರರ ಕಷ್ಟ ಆಲಿಸಿದರು.
ಸೇವಂತಿಗೆ, ಗಲಾಟೆ ಹೂವುಗಳನ್ನು ಬೆಳೆದ ರೈತರ ಜಮೀನುಗಳಿಗೆ ತೆರಳಿ ಸ್ವತಃ ಬೆಳೆನಷ್ಟ ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಡಾ ಸಂತೋಷ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಸಿ.ಜಿ.ಮೇತ್ರಿ, ರುದ್ರಪ್ಪ ಅರಿವಾಳ, ರಾಜು ಜೀವಣ್ಣವರ, ಮಹೇಶ ಯಲಿಗಾರ, ಈರಣ್ಣ ಹೊಸಮನಿ,ಈರಣ್ಣ ಕರ್ಲಿಂಗಣವರ್,ಶಿವು ಜನಗೌಡ, ಸಂಬಾಜಿ ಜಾಧವ, ವಿರೂಪಾಕ್ಷಿ ನೆಸಂಬರ, ಮಲ್ಲೇಶ ಮಾಳಗಿ, ಮಡಿವಾಳಿ ವಾಗನವರ್, ತಮ್ಮಣ್ಣ ಗುಂಡಗೋವಿ,ಬಸವರಾಜ್ ವಕ್ಕು0ದ,ಈರಪ್ಪ ಶಿರೂರ್,ಭೀಮಪ್ಪ ಪೂಜಾರ್,ಲಕ್ಷ್ಮಣ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.